ಧಾರವಾಡ :ವಿಶ್ವ ಅಸೋಸಿಯೇಟ್ಸ್, ಧಾರವಾಡ ಇದರ ಸಂಚಾಲಕರಾದ ಶಾಂತೇಶ ಸಿ. ಚಿಕ್ಕಲಕಿ ಗೆಳೆಯರ ಬಳಗ
ದಿ. 25 ರವಿವಾರದಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಧಾರವಾಡ ಶಹರದ ಶ್ರೀಮತಿ ಗೌರಮ್ಯ ಹಿರೇಮಠ (ರಪಾಟಿ) ಕಲ್ಯಾಣಮಂಟಪದಲ್ಲಿ ರಾಜ್ಯಮಟ್ಟದ ವೀರಶೈವ ಲಿಂಗಾಯತ ಎಲ್ಲ ಒಳ ಪಂಗಡಗಳ 25 ನೇ (ರಜತಮಹೋತ್ಸವ) ಅಂಗವಾಗಿ ವಧು ವರರ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಶಾಂತೇಶ ಸಿ. ಚಿಕ್ಕಲಕಿ ತಿಳಿಸಿದರು.
ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು , ಈ ಸಮಾವೇಶವನ್ನು ಕೇಂದ್ರ ಸಚಿವರಾದ ಮಾನ್ಯ ಪ್ರಹ್ಲಾದ ಜೋಶಿಯವರು ಉದ್ಘಾಟಿಸಲಿದ್ದು, ಅಲ್ಲದೇ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಜಗದೀಶ ಶೆಟ್ಟರ ಅವರು ಜ್ಯೋತಿ ಬೆಳಗಿಸಲಿದ್ದಾರೆ. ಅಧ್ಯಕ್ಷತೆಯನ್ನು ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಅರವಿಂದ ಬೆಲ್ಲದ ವಹಿಸುವರು ಮುಖ್ಯ ಅತಿಥಿಗಳಾಗಿ ಧಾರವಾಡ ಗ್ರಾಮೀಣ ಶಾಸಕರಾದ ಸನ್ಮಾನ್ಯ ಅಮೃತ ದೇಸಾಯಿ, ಪೂಜ್ಯ ಮಹಾಪೌರರಾದ ಈರೇಶ ಅಂಚಟಗೇರಿ, ಮಾಜಿ ಶಾಸಕರಾದ ಶ್ರೀಮತಿ ಸೀಮಾ ಮಸೂತಿ, ಕೆ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೊರಕೇರಿ, ಮಾಜಿ ಮೇಯರ ಶಿವು ಹಿರೇಮಠ, ಕರ್ನಾಟಕ ಬಯಲು ಸೀಮೆ ಪ್ರಾಧಿಕಾರದ ರಾಜ್ಯಾಧ್ಯಕ್ಷರಾದ ತವನಪ್ಪ ಅಷ್ಟಗಿ, ಕರ್ನಾಟಕ ಜಂಗಲ್ ಲಾಜಿಸ್ಟ್ ರೆಸಾರ್ಟ ರಾಜ್ಯಾಧ್ಯಕ್ಷರಾದ ರಾಜೇಶ ಕೊಟ್ಟೆಣ್ಣನವರ, ಮತ್ತು ವೀರಶೈವ ಲಿಂಗಾಯತ ಮುಖಂಡರುಗಳಾದ ಚನ್ನಬಸಪ್ಪ ಮರದ, ರವಿಶಂಕರ ಹಕಾರಿ, ರುದ್ರಗೌಡ ಪಾಟೀಲ, ಈಶ್ವರ ಕಡ್ಲಿಮಟ್ಟಿ, ನಾಗಪ್ಪ ಬಿದರಿ ಹಾಗೂ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ಉಪಸ್ಥಿತರಿರುವರು ಎಂದರು.
ಈರಣ್ಣ ಚಿಕ್ಕ ಬೆಳ್ಳಿಕಟ್ಟಿ, ಮಂಜುನಾಥ ನೀರಲಕಟ್ಟಿ,ಶಂಕರ ಕೂಟ್ಟ್ರಿ ಶಿವು ಹಲಗಿ,ಬಸವರಾಜ ನಚಿ೯ ಪತ್ರೀಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

