ಕುಂದಗೋಳ: ಮಟ್ಕಾ ಅಂಕಿ ಸಂಖ್ಯೆ ಬರೆಯುವಲ್ಲಿ ತೊಡಗಿದ್ದ ವ್ಯಕ್ತಿಯನ್ನು ಬಂಧಿಸಿದ ಕುಂದಗೋಳ ಪೊಲೀಸರು, ಆರೋಪಿಯಿಂದ ನಗದು ಹಾಗೂ ಮಟ್ಕಾ ಬರೆಯಲು ಬಳಸಿದ್ದ ಇತರೆ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.
ಮೂಲತಃ ಗದಗ ಜಿಲ್ಲೆಯ ಬೂದಿಶ್ವರ ಹೊಸಳ್ಳಿ ಗ್ರಾಮದ 23 ವರ್ಷ ವಯಸ್ಸಿನ ಪ್ರಭು ಬಾನದ ಎಂಬಾತನೇ ಬಂಧಿತನ ಆರೋಪಿ. ಈತ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ನಿಂತು ಅಂಕಿ ಸಂಖ್ಯೆ ಇರುವ ಚೀಟಿ ಬರೆದು ಕೊಡುವ ಮೂಲಕ ಓಸಿ ಮಟ್ಕಾ ಸಂಖ್ಯೆ ಬರೆಯುತ್ತಿದ್ದ. ಖಚಿತ ಮಾಹಿತಿ ಮೇರೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ 1,300 ರೂಪಾಯಿ ನಗದು ಹಾಗೂ ಮಟ್ಕಾ ಜೂಜಾಟಕ್ಕೆ ಬಳಕೆ ಮಾಡುತ್ತಿದ್ದ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

