Breaking News

ಬೆಂಗಳೂರಲ್ಲಿ ಅಂಗಡಿಯಲ್ಲೇ ಮಾಲೀಕನ ಬರ್ಬರ ಕೊಲೆ

ಬೆಂಗಳೂರು: ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೃಹೋಪಯೋಗಿ ವಸ್ತುಗಳ ಅಂಗಡಿ ಮಾಲೀಕ ರಾಜು ಸಿಂಗ್ ಅವರನ್ನು ಅಂಗಡಿಯೊಳಗೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಜೆ.ಪಿ.ನಗರ 7ನೇ ಹಂತದ ಗಂಗಾ ಇಂಡಸ್ಟ್ರೀಸ್‌ನಲ್ಲಿರುವ ಅಂಗಡಿಯಲ್ಲಿ ರಾತ್ರಿ 7.30ರ ಸುಮಾರಿಗೆ ಘಟನೆ ನಡೆದಿದೆ. ಅಂಗಡಿಯಲ್ಲಿ ಒಬ್ಬರೇ ಇದ್ದ ರಾಜು ಸಿಂಗ್ ಅವರ ತಲೆಗೆ ಹರಿತವಾದ ಆಯುಧದಿಂದ ಹೊಡೆದು ದುಷ್ಕರ್ಮಿ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪುಟ್ಟೇನಹಳ್ಳಿ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Share News

About BigTv News

Check Also

ಗರಗಸದಿಂದ ರುಂಡ-ಮುಂಡ ಬೇರ್ಪಡಿಸಿ, 2 ಚೀಲದಲ್ಲಿ ತುಂಬಿದ ರಾಕ್ಷಸರು : ಪೋಸ್ಟ್ ಮಾರ್ಟಂನಲ್ಲಿ ಬೆಚ್ಚಿ ಬೀಳಿಸುತ್ತೆ ಪ್ರಕಾಶ್ ಕುಂದರ್ ಹತ್ಯೆ!

ಶಾರ್ಜಾದಲ್ಲಿ ಉಡುಪಿ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಎಂಬವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಅವರ …

Leave a Reply

Your email address will not be published. Required fields are marked *