Breaking News

ಗರಗಸದಿಂದ ರುಂಡ-ಮುಂಡ ಬೇರ್ಪಡಿಸಿ, 2 ಚೀಲದಲ್ಲಿ ತುಂಬಿದ ರಾಕ್ಷಸರು : ಪೋಸ್ಟ್ ಮಾರ್ಟಂನಲ್ಲಿ ಬೆಚ್ಚಿ ಬೀಳಿಸುತ್ತೆ ಪ್ರಕಾಶ್ ಕುಂದರ್ ಹತ್ಯೆ!

ಶಾರ್ಜಾದಲ್ಲಿ ಉಡುಪಿ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಎಂಬವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ದೇಹವನ್ನು 9 ತುಂಡುಗಳಾಗಿ ಕತ್ತರಿಸಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಘಟನೆ ಬಳಿಕ ಪ್ರಕಾಶ್ ಅವರ ಪತ್ನಿ ಟೀನಾ ಕುಂದರ್ ನಾಪತ್ತೆಯಾಗಿದ್ದು, ಪತಿಯ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿಕೊಂಡು ತೆರಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಪತ್ನಿಯ ಮೇಲೂ ಅನುಮಾನ ಮೂಡಿದ್ದು, ತನಿಖೆ ಮುಂದುವರಿದಿದೆ. ಮೃತದೇಹವನ್ನು ಭಾರತಕ್ಕೆ ತರಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕಿಸಿ, ಮೃತದೇಹವನ್ನು ಶೀಘ್ರ ಭಾರತಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ.

Share News

About BigTv News

Check Also

ಬೆಂಗಳೂರಲ್ಲಿ ಅಂಗಡಿಯಲ್ಲೇ ಮಾಲೀಕನ ಬರ್ಬರ ಕೊಲೆ

ಬೆಂಗಳೂರು: ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೃಹೋಪಯೋಗಿ ವಸ್ತುಗಳ ಅಂಗಡಿ ಮಾಲೀಕ ರಾಜು ಸಿಂಗ್ ಅವರನ್ನು ಅಂಗಡಿಯೊಳಗೇ ಬರ್ಬರವಾಗಿ ಕೊಲೆ …

Leave a Reply

Your email address will not be published. Required fields are marked *