Breaking News

ಚರಂಡಿಯಲ್ಲಿ ಯುವಕನ ಶವ ಪತ್ತೆ

ಧಾರವಾಡ : ರಾತ್ರಿ ಮನೆಯಿಂದ ಹೊರ ಹೋದ ವ್ಯಕ್ತಿಯೊಬ್ಬ ಇಂದು ಬೆಳಗಾಗುವಷ್ಟರಲ್ಲಿ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಅಮ್ಮಿನಭಾವಿ ಗ್ರಾಮದ ಮಲ್ಲಿಕಾರ್ಜುನ ಗೂಳದಕೊಪ್ಪ (45) ಎಂಬಾತನೇ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮನೆಯಿಂದ ಹೊರ ಹೋಗಿದ್ದ ಈತ , ಬೆಳಗಾಗುವಷ್ಟರಲ್ಲಿ ಗ್ರಾಮದ ಗ್ರಾಮ ದೇವಿ ದೇವಸ್ಥಾನ ಬಳಿಯ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ . ಅರೆನಗ್ನ ಸ್ಥಿತಿಯಲ್ಲಿರುವ ಶವ ಕಂಡು ಆತನ ಕುಟುಂಬಸ್ಥರು ರೋದಿಸುತ್ತಿದ್ದಾರೆ. ‌ ಈ ಕುರಿತಂತೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿಚಾರಣೆ ಮುಂದುವರೆದಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *