Breaking News

ನವಲಗುಂದದಲ್ಲಿ ನೆರೆ ವೀಕ್ಷಿಸಿ ಜನರೊಂದಿಗೆ ಚರ್ಚೆಸಿದ ಸಚಿವ ಲಾಡ್

ಧಾರವಾಡ ಮುಂಗಾರು ಮಳೆ ಆರಂಭವಾದಗಲು ನವಲಗುಂದ ತಾಲೂಕಿನ ಜನತೆ ಪ್ರವಾಹದ ಭೀತಿ ಎದುರಿಸುತ್ತಾರೆ ಏಕೆಂದರೆ ಇಲ್ಲಿನ ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳದ ಆರ್ಭಟ ಅಷ್ಟು ಜೋರಾಗಿರುತ್ತದೆ ಕಳೆದ ಹತ್ತು ದಿನಗಳಿಂದ ಧಾರವಾಡ ಜಿಲ್ಲೆಯಲ್ಲಿ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದ್ದು ನವಲಗುಂದ ಭಾಗದ ಜನತೆ ಮತ್ತೆ ಪ್ರವಾಹದ ಭೀತಿ ಎದುರಿಸುವಂತಾಗಿದೆ.

ಇಂದು ನವಲಗುಂದ ತಾಲೂಕಿನ ಯಮನೂರು ಗ್ರಾಮದ ಬಳಿ ಇರುವ ಬೆಣ್ಣೆ ಹಳ್ಳದ ನೀರಿನ ತೀವ್ರತೆಯನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ವೀಕ್ಷಣೆ ಮಾಡಿದರು ಬೆಣ್ಣೆ ಹಳ್ಳ ತುಂಬಿ ಬಂದಿದ್ದು ಇನ್ನಷ್ಟು ದಿನ ಇದೇ ರೀತಿ ಮಳೆ ಮುಂದುವರೆದಿದ್ದೇ ಆದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ . ಜನರಿಗೆ ಯಾವುದೇ ತೊಂದರೆಗಳಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು .

ನಂತರ ಗುಡಿಸಾಗರ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಲಾಡ್ , ಗ್ರಾಮದ ಸಾದು ಸಿದ್ಧ ಶಿವಯೋಗಿ ಮಠದಲ್ಲಿ ಗುಡಿಸಾಗರ ಗ್ರಾಮದ ಜನರೊಂದಿಗೆ ಸಮಾಲೋಚನೆ ನಡೆಸಿದರು . ಸಚಿವರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಅಧಿಕಾರಿ ವಗ೯ದವರು ಭಾಗವಹಿಸಿದ್ದರು.

Share News

About bigtvnews22

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *