ಹುಬ್ಬಳ್ಳಿ: ಅವಳಿನಗರದಲ್ಲಿ ದಿನಕ್ಕೊಂದು ಅಕ್ರಮ ಚಟುವಟಿಕೆಗಳ ಬಲೆ ಬೆಳೆಯುತ್ತಲೇ ಇದೆ.ಇದೀಗ ಹವಾಲ್ ದಂಧೆ ನಗರದಲ್ಲಿ ಜೋರಾಗಿದ್ದು,ಕಡಿವಾಣ ಹಾಕಬೇಕಿರೂ ಅಧಿಕಾರಿಗಳು ಸುಮ್ಮನಿರುವುದು ವಿಪರ್ಯಾಸವೇ ಸರಿ.ಹೌದು ವಾಣಿಜ್ಯ ನಗರಿ ಹುಬ್ಬಳ್ಳಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.ಜೊತೆಗೆ ಅಕ್ರಮ ಚಟುವಟಿಕೆಗಳನ್ನು ಕೂಡ ಮೈಗೂಡಿಸಿಕೊಂಡ ಬೆಳೆಯುತ್ತಿರುವುದು ಬೇಸರದ ಸಂಗತಿ. ಯಾಕಂದ್ರೆ ಅವಳಿನಗರಗಳಲ್ಲಿ ಎಲ್ಲೆಂದರಲ್ಲಿ ಚಾಕು

ಇರಿತ,ಗಲಾಟೆ ,ಕಳ್ಳತನ ಹೀಗೆ ಅನೇಕ ಚಟುವಟಿಕೆಗಳು ನೆಡೆಯುತ್ತಿದ್ದರೂ ಕೂಡ ಸಂಭಂಧಿಸಿದ ಅಧಿಕಾರಿಗಳು ಎಷ್ಟೇ ಸೂಕ್ತ ಕ್ರಮ ಕೈಗೊಂಡರು ಏನು ಪ್ರಯೋಜನವಾಗಿಲ್ಲ.ಇದೀಗ ಮತ್ತೊಂದು ಹವಾಲ್ ದಂಧೆ ನಗರದಲ್ಲಿ ಜೋರಾಗಿದ್ದು, ಪೋಲಿಸ್ ಠಾಣೆಯ ಪಕ್ಕದಲ್ಲೇ ಈ ದಂಧೆ ನೆಡೆಸುತ್ತಿರುವ ಖದೀಮರು ಯಾರಿಗೂ ಕ್ಯಾರೇ ಅನ್ನದೇ ದಂಧೆ ನೆಡೆಸುತ್ತಿದ್ದಾರೆ.ಈ ಕುರಿತು ಕಾರ್ಯಾಚರಣೆಯಲ್ಲಿ ಕಂತೆ ಕಂತೆ ಹಣದ ಬಗ್ಗೆ ಮಾಹಿತಿ ದೊರೆತಿದ್ದು,*ಸದ್ಯದಲ್ಲೇ ವಿಡಿಯೋ ಮೂಲಕ ನಿಮ್ ಬಿಗ್ ಟಿವಿ ನ್ಯೂಸ್* ಬಿಚ್ಚಿಡಲಿದೆ ಸ್ಪೋಟಕ ಮಾಹಿತಿ*.ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಆಯುಕ್ತರು ಸೂಕ್ತ ಕ್ರಮ ಕೈಗೊಳ್ತಾರಾ ಕಾದು ನೋಡಬೇಕಿದೆ..