ಪರಿಚಯಸ್ಥ ಅಪ್ರಾಪ್ತ ಬಾಲಕಿಯನ್ನು ಮೊಬೈಲ್ ಫೋನ್ ಕೊಡಿಸುವ ನೆಪದಲ್ಲಿ ಹುಬ್ಬಳಿಗೆ ಕರೆತಂದಿದ್ದ ಯುವಕನೋರ್ವ ತನ್ನ ಗೆಳೆಯರ ಜೊತೆ ಸೇರಿಕೊಂಡು ಗ್ಯಾಂಗ್ ರೇಪ್ ಮಾಡಿದ ಪ್ರಕರಣ ಹುಬ್ಬಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಜೀವ ಬೆದರಿಕೆ ಹಾಕಿ ಬಲವಂತವಾಗಿ ನಾಲ್ವರು ಕಾಮುಕರು ಅಪ್ರಾಪ್ತ ಬಾಲಕಿ ಮೇಲೆಗ್ಯಾಂಗ್ ರೇಪ್ ಮಾಡಿದ ಘಟನೆ, ಹುಬ್ಬಳಿ ಬೈಪಾಸ್ ರಿಂಗ್ ರೋಡ್ ಬ್ರಿಡ್ಜ್ ಬಳಿ ನಿನ್ನೆ ನಡೆದಿದೆ. ಸಂತ್ರಸ್ತರ ಬಾಲಕಿಯ ಜೊತೆಗೆ ಕೆಲ ದಿನಗಳಿಂದ ಫೋನ್ ನಲ್ಲಿ ಓರ್ವ ಯುವಕ

ಮಾತನಾಡುತ್ತಿದ್ದ, ಇಬ್ಬರ ನಡುವೆ ಸ್ನೇಹ ಸಹ ಬೆಳದಿತ್ತು. ಈ ಸಲುಗೆಯಿಂದ ಮೊಬೈಲ್ ಕೊಡಿಸುವ ಆಮಿಷ ತೋರಿಸಿ, ಬಾಲಕಿ ಗ್ರಾಮದಿಂದ ಹುಬ್ಬಳಿಗೆ ಕರೆಯಿಸಿದ್ದ. ಬಾಲಕಿ ಜೊತೆಗೆ ಸಿಟಿ ಸುತ್ತಿ, ನಂತರ ಖಾಸಗಿ ಹೋಟೆಲ್ ಒಂದೊಕ್ಕೆ ಕರೆದುಕೊಂಡು ಹೋದ ಯುವಕ ತನ್ನ ಮತ್ತೊಬ್ಬ ಸ್ನೇಹಿತನ ಜೊತೆ ಸೇರಿಕೊಂಡು ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಬೈಕ್ ಮೇಲೆ ಹುಬ್ಬಳಿ ಬೈಪಾಸ್ ರಿಂಗ್ ರೋಡ್ ನಲ್ಲಿನ ಬ್ರಿಡ್ಜ್ ಬಳಿಗೆ ಕರೆದುಕೊಂಡು ಹೋಗಿ ಇಬ್ಬರು ಜೀವ ಬೆದರಿಕೆ ಹಾಕಿ ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ. ಬಳಿಕ ಮತ್ತೆ ತನ್ನಿಬ್ಬರ ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿ ಅವರ ಕೈಯಿಂದಲೂ ಅತ್ಯಾಚಾರ ಮಾಡಿಸಿದ್ದಾನೆ.ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.