ಹುಬ್ಬಳ್ಳಿ : ಸಮೀಕ್ಷೆಗಳೆಲ್ಲವೂ ಹುಸಿಯಾಗಿ ಮೂರನೆಯ ಬಾರಿಗೆ ಹರಿಯಾಣದಲ್ಲಿ ಬಿಜೆಪಿ ಗೆದ್ದಿದೆ. ಬಿಜೆಪಿಗೆ ವಿರೋಧಿ ಅಲೆ ಎಂದು ಬಿಂಬಿಸಲಾಗಿತ್ತು. ಫ್ರೀ ಸ್ಟೀಮ್‌ಗಳನ್ನ ಕೊಡುತ್ತೆವೆಂದು ಕಾಂಗ್ರೆಸ್ ಹೇಳಿತ್ತು. ಇದನ್ನೆಲ್ಲವನ್ನೂ ಮೀರಿ ಹರಿಯಾಣದ ಜನತೆ ಬಿಜೆಪಿಗೆ ಜೈ ಎಂದಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಹರಿಯಾಣ ಚುನಾವಣೆ ಸಂಬಂಧಿಸಿದ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಕಂಡಿದೆ. ಜಮ್ಮುವಿನಲ್ಲಿ 20 ರಿಂದ 30 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಒಂದು ಕಾಲದಲ್ಲಿ ಜಮ್ಮು ಕಾಶ್ಮೀರದಲ್ಲಿ ಚುನಾವಣೆಗಳು ಹಿಂಸೆಯಿಂದಲೇ ನಡೆಯುತ್ತಿದ್ದವು. ಯಾವಾಗಲೂ ಬಾಂಬ್ ಬ್ಲಾಸ್ಟ್, ಗೋಲಿಬಾರ್ ನಡೆಯುವಂತಹ ಸನ್ನಿವೇಶವಿತ್ತು. ಆದ್ರೆ ಇಡೀ ಜಗತ್ತು ನೋಡಿದಂತೆ ಆರ್ಟಿಕಲ್ 370 ರದ್ದು ಮಾಡಿದ ಮೇಲೆ ಅಚ್ಚುಕಟ್ಟಾಗಿ ಚುನಾವಣೆ ನಡೆದಿದೆ ಎಂದರು.
ಎಲ್ಲಿಯೂ ಗೊಂದಲ, ಗಲಾಟೆ ಆಗದಂತೆ ಚುನಾವಣೆಯನ್ನು ಚುನಾವಣೆ ಆಯೋಗ ಮಾಡಿದೆ. ಜಮ್ಮು ಕಾಶ್ಮೀರದಲ್ಲಿ ಜನರ ಆಶೀರ್ವಾದವನ್ನ ನಾವು ಸ್ವಾಗತ ಮಾಡುತ್ತೇವೆ. ಈ ಚುನಾವಣೆ ಮುಖಾಂತರ ಕಾಂಗ್ರೆಸ್‌ಗೆ ಸ್ಪಷ್ಟವಾದ ಸಂದೇಶವನ್ನ ಈ ದೇಶದ ಜನತೆ ಕಳುಹಿಸಿದ್ದಾರೆ. ಫ್ರೀ ಗ್ಯಾರಂಟಿಗಳಿಗೆ ಯಾವುದೇ ಮನ್ನಣೆ ಇಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

