ನಾವು ಬೂದಿಯಾಗುವ ಮುನ್ನ ನಮ್ಮ ಬಾಯಲ್ಲಿ ಬೂದಿ ಬಿಡುವುದನ್ನ ತ್ಯಜಿಸೋಣ : ಡಾ. ಪದ್ಮಾಕ್ಷಿ ಲೋಕೇಶ್
ಬೆಂಗಳೂರು ಅಂತರಾಷ್ಟ್ರೀಯ ತಂಬಾಕು ನಿಷೇಧ ದಿನಾಚರಣೆಯ ಭಾಗವಾಗಿ ತಂಬಾಕು ಸೇವನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಿಲ್ಪಾ ಫೌಂಡೇಶನ್ ವತಿಯಿಂದ ನಗರದ ಬನಶಂಕರಿಯ ಬ್ರಿಗೇಡ್ ಸಾಫ್ಟ್ ವೇರ್ ಪಾರ್ಕಿ ನಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ಹಾಗೂ ದ್ವಿಚಕ್ರ ವಾಹನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು..
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಖ್ಯಾತ ಮನಶಾಸ್ತ್ರಜ್ಞರಾದ ಡಾ. ಪದ್ಮಾಕ್ಷಿ ಲೋಕೇಶ್, ನಾವು ಬೂದಿಯಾಗುವ ಮುನ್ನ ನಮ್ಮ ಬಾಯಲ್ಲಿ ಬೂದಿ ಬಿಡುವುದನ್ನ ನಿಲ್ಲಿಸಬೇಕಿದೆ. ಉತ್ತಮ ಆರೋಗ್ಯದೊಂದಿಗೆ ಬದುಕುವುದಕ್ಕಾಗಿ ಮತ್ತು ನರಳಿ ಸಾಯುವ ಬದಲು ಸುಖವಾಗಿ ಸಾಯುವುದಕ್ಕಾದರೂ ನಾವು ತಂಬಾಕು ವ್ಯಸನವನ್ನು ನಿಲ್ಲಿಸಬೇಕಿದೆ. ಬದುಕಲ್ಲಿ ನಾವು ಸ್ವಯಂ ಬಂಧಿಯಾಗುವುದಕ್ಕಿಂತ ನಮ್ಮನ್ನು ಸಾಯಿಸುವ ಛಟಗಳನ್ನು ನಮ್ಮ ಬಳಿ ಬರಲಾಗದಂತೆ ಬಂಧಿಯಾಗಿಸೋಣ. ಅಲ್ಲದೇ ಇಂತಹ ಛಟಗಳನ್ನು ವಿರೋಧಿಸುವ ಮೂಲಕ ಇನ್ನೊಬ್ಬರ ಜೀವನದಲ್ಲೂ ಖುಷಿಯನ್ನು ತರಿಸುವ ಪ್ರಯತ್ನ ಮಾಡೋಣ ಎಂದು ಹೇಳಿದರು.
ಇನ್ನು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಂ.ಆರ್ ರವಿ, ಜೀವನ ಏನು ಅನ್ನೋ ಪ್ರಭುದ್ಧತೆ ಬರುವ ಮುನ್ನವೇ
ಇನ್ನು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಂ.ಆರ್ ರವಿ, ಜೀವನ ಏನು ಅನ್ನೋ ಪ್ರಭುದ್ಧತೆ ಬರುವ ಮುನ್ನವೇ ನಾವೆಲ್ಲ ನಮ್ಮ ಅರ್ಧ ಜೀವನವನ್ನು ಕಳೆದುಬಿಡುತ್ತೇವೆ. ತತ್ವಜ್ಞಾನಿಗಳಂತೆ ಮಾತುಗಳನ್ನಾಡುವ ನಾವು ಮೂರ್ಖರ ರೀತಿ ಜೀವನವನ್ನು ನಡೆಸುವ ಯುವ ಸಮೂಹ ನಮ್ಮ ಮುಂದಿದೆ. ಆದುದರಿಂದಲೇ ನಮ್ಮ ಯುವ ಸಮೂಹ ಆರೋಗ್ಯ, ಸಮಯ ಮತ್ತು ಸಂತೋಷಭರಿತ ಕ್ಷಣಗಳು ಇರುವಾಗಲೇ ಅದನ್ನ ಅನುಭವಿಸದಿದ್ದರೆ ಮೂರ್ಖರಾಗಿಬಿಡುತ್ತೇವೆ. ಇಂದಿನ ಯುವಕರು ವಿರ್ಧಯಾವಂತರಾಗುತ್ತಾರೆಯೇ ಹೊರತು ವಿಧ್ಯಾವಂತರಾಗಲೀ ವಿವೇಕಗಳಾಗಲೀ ಆಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಿಲ್ಪಾ ಫೌಂಡೇಶನ್ ಸಂಸ್ಥಾಪಕರಾದ ಅಚ್ಚುತ್ ಗೌಡ, ವುರ್ಥ್ ಇಲೆಕ್ಟ್ರಾನಿಕ್ ಇದರ ಕಮಲಾ ಶೇಷಾದ್ರಿ, ಫಿಡಿಲಿಟಸ್ ಕಾರ್ಪ್ ನಿರ್ದೇಶಕಿ ಶುಭಲಕ್ಷ್ಮೀ ಆಳ್ವ ಹಾಗೂ ಮತ್ತಿತರು ಭಾಗವಹಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





