Breaking News

ಮನೆಯೊಡೆಯನಿಗೂ 2000 ಸಾವಿರ ರೂಪಾಯಿ ಕೊಡಲು ಒತ್ತಾಯ

ಮನೆಯೊಡೆಯನಿಗೂ 2000 ಸಾವಿರ ರೂಪಾಯಿ ಕೊಡಲು ಒತ್ತಾಯ

ಧಾರವಾಡ: ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳಲ್ಲೊಂದಾದ ಮನೆಯೊಡತಿಗೆ 2 ಸಾವಿರ ರೂಪಾಯಿ ಕೊಡುವ ಯೋಜನೆ ಅತ್ತೆಗೆ ನೀಡಬೇಕೋ ಅಥವಾ ಸೊಸೆಗೆ ನೀಡಬೇಕೋ ಎಂಬ ಗೊಂದಲ ಶುರವಾದ ಬೆನ್ನಲ್ಲೇ ಕಾಂಗ್ರೆಸ್‌ಗೆ ಕೇವಲ ಮಹಿಳೆಯರಷ್ಟೇ ಅಲ್ಲ ಪುರುಷರೂ ಮತ ಹಾಕಿದ್ದಾರೆ.

ಮನೆಯೊಡೆಯನಿಗೂ ಮಾಸಿಕ 2 ಸಾವಿರ ರೂಪಾಯಿ ಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪಾಸ್ ಅಂತಾ ಸರ್ಕಾರ ತಿಳಿಸಿದೆ. ಇದು ಮಹಿಳೆಯರಿಗೆ ಕೊಟ್ಟಂತಹ ದೊಡ್ಡ ಕೊಡುಗೆ. ಆದರೆ, ಮಹಿಳೆಯರು, ಪುರುಷರು ಮತ್ತು ಯುವಕರು ಸೇರಿ ಎಲ್ಲರೂ ಸಮಾನವಾಗಿ ಸರ್ಕಾರಕ್ಕೆ ವೋಟ್ ಮಾಡಿದ್ದೇವೆ.

ಈಗ ಮಹಿಳೆಯರು, ಪುರುಷರು ಅಂತಾ ಏಕೆ ಬೇಧ ಭಾವ ಮಾಡುತ್ತಿದ್ದೀರಿ. ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ ಎಂದು ಹೇಳುವ ಕಾಂಗ್ರೆಸ್ ಈಗ ಏಕೆ ಬೇರೆ ಬೇರೆಯಾಗಿ ನೋಡುತ್ತಿದ್ದೀರಿ. ಪುರುಷರಿಗೂ ಫ್ರೀ ಬಸ್ ಪಾಸ್ ಗ್ಯಾರಂಟಿ ಕೊಡಬೇಕು. ಇದಲ್ಲದೇ ಮನೆಯೊಡತಿಗೆ 2000 ರೂಪಾಯಿ ಕೊಡುತ್ತೇವೆ ಎಂದು ಹೇಳಿದ್ದಾರೆ.

ಮನೆ ನಡೆಸುವವರು ಮನೆಯ ಯಜಮಾನ. ಅವರಿಗೇಕೆ ಸರ್ಕಾರ 2 ಸಾವಿರ ರೂಪಾಯಿ ಕೊಡಬಾರದು? ಸರ್ಕಾರ ಬೇಧ ಭಾವ ಮಾಡದೇ ಮನೆಯಲ್ಲಿ ಜಗಳ ಹಚ್ಚದೇ ಇಬ್ಬರಿಗೂ 2 ಸಾವಿರ ರೂಪಾಯಿ ಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Share News

About bigtvnews22

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕುನಿಂದ ಕೊಲೆ ಯತ್ನ ನಗರದಲ್ಲಿ …

Leave a Reply

Your email address will not be published. Required fields are marked *