Breaking News

ರೈತನ ಬದುಕನ್ನೇ ಕೊಳ್ಳಿ ಇಟ್ಟ ಬಿರುಗಾಳಿ ನೆಲಕ್ಕೂರುಳಿದ ಬಾಳೆ ಬೆಳೆ

ರೈತನ ಬದುಕನ್ನೇ ಕೊಳ್ಳಿ ಇಟ್ಟ ಬಿರುಗಾಳಿ, ನೆಲಕ್ಕೂರುಳಿದ ಬಾಳೆ ಬೆಳೆ

ಹುಬ್ಬಳ್ಳಿ ರೈತ ತಾನು ಬೆಳೆದ ಬೆಳೆಯನ್ನು ಬಿರುಗಾಳಿ ಎಂಬ ಭೂತ ಬಂದು ಕೊಚ್ಚಕೊಂಡು ಹೋಗಿದೆ.. ವರ್ಷವಿಡಿ ಬೆಳೆದ ಬಾಳಿ ಗಿಡಗಳು ಬಿರುಗಾಳಿ ರಬಸಕ್ಕೆ ನೆಲಸಮವಾದ ಘಟನೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ.

ರೈತ ಅಪ್ಪಯ್ಯ ವಸ್ತ್ರದ ಎಂಬುವರ ಹೊಲದಲ್ಲಿ ಸಂಜೆಹೊತ್ತಿಗೆ ಬಿಸಿದ ಬಿರುಗಾಳಿ ಹೊಡೆತಕ್ಕೆ ಬಾಳೆಗಿಡಗಳು ಸಂಪೂರ್ಣ ನಾಶವಾಗಿ ನೆಲಸಮವಾಗಿ ಬಿಟ್ಟಿವೆ. ಸುಮಾರು ಒಂದೂವರೆ ಎಕ್ರೆ ಬಾಳೆಬೆಳೆ ನೆಲ ಕಚ್ಚಿಕೊಂಡು ಬಿಟ್ಟಿದೆ. ವರ್ಷವಿಡೀ ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆಸಿದ ಬಾಳೆ ಬೆಳೆಯೂ ಇನ್ನೇನು ವಾರ ಕಳೆಯುವಷ್ಟರಲ್ಲಿಯೇ ಕಟಾವ್ ಆಗಿ ಮಾಡಿದ ಸಾಲ ಹರಿಯುತ್ತೆ ಎಂಬ ನಿರೀಕ್ಷೆಯಲ್ಲಿದ್ದ ರೈತನ

ಬದುಕಿಗೆ, ಒಂದೇ ದಿನದಲ್ಲಿ ಬಿರುಗಾಳಿ ಭೂತ ಮುಳ್ಳಾಗಿ ಬಂದು ರೈತನ ಬದುಕನ್ನೇ ಕಿತ್ತುಕೊಂಡಿದೆ.
ಬಿರುಗಾಳಿ ಹೊಡೆತಕ್ಕೆ ಒಂದೂವರೆ ಎಕ್ರೆಯಲ್ಲಿನ 500 ಬಾಳೆ ಗಿಡಗಳು ನೆಲಕಚ್ಚಿ ಅಂದಾಜು 5 ಲಕ್ಷ ರೂ.ದಷ್ಟು ಹಾನಿಯಾಗಿರುವುದರಿಂದ ರೈತ ಭೂತಾಯಿ ಮಡಿಲಲ್ಲಿ ಕಣ್ಣೀರಿಟ್ಟಿದ್ದಾನೆ.

ಆದ್ದರಿಂದ ತಾಲೂಕಿನ ದಂಡಾಧಿಕಾರಿಗಳು ಈ ರೈತನ ಗೋಳು ಆಲಿಸಿ ಅವನ ನೆರವಿಗೆ ಬರಬೇಕು ಎಂಬುದೇ ನಮ್ಮ ಆಶಯ.
ಹುಬ್ಬಳ್ಳಿ ಧಾರವಾಡ ಕುಂದಗೋಳ ಸೇರಿದಂತೆ ವಿವಿಧ ಕಡೆ
ಕೇಲವಡೆ ಬೀಸಿದ ಬಿರುಗಾಳಿಗೆ ಬಾಳೆ ಬೆಳೆ ಹಾಳಾಗಿತ್ತು. ಆಗ ಸರಕಾರ ಎಕರೆಗೆ ಕಡಿಮೆ ಪರಿಹಾರಧನ ವಿತರಿಸಿದ್ದು . ಇದನ್ನು ಮನಗಂಡಿರುವ ರೈತರು, ಸಂಬಂಧಿಸಿದ ಇಲಾಖೆ ಬಾಳೆ ಬೆಳೆ ನಷ್ಟವೊಂದಿದವರಿಗೆ ಹೆಚ್ಚಿನ ಪರಿಹಾರ ಧನ ವಿತರಿಸಬೇಕು ಎಂದು ಒತ್ತಾಯಿಸಿದ್ದು ಸರ್ಕಾರ ಮತ್ತು ತೋಟಗಾರಿಕಾ ಇಲಾಖೆಯು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಬಿರುಗಾಳಿಗೆ ಈ ಭಾಗದಲ್ಲಿ ಬೆಳೆಸಿದ ಬಾಳೆ ತೋಟದಲ್ಲಿನ ಬಹಳಷ್ಟು ಗಿಡಗಳು ಹಾಳಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಬೆಳೆ ಹಾನಿಯಾದ ಜಮೀನುಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಬೇಕು. ಸರಕಾರ ವೈಜ್ಞಾನಿಕ ಪರಿಹಾರ ಧನ ವಿತರಿಬೇಕಾಗಿದೆ

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *