Breaking News
Featured Video Play Icon

ಹಣೆಬರಹ ಗಟ್ಟಿಯಿತ್ತು!! ಜಸ್ಟ್ ಮಿಸ್ ಆದ ದೀಪಕ್ ಏನಂದ್ರು ಕೇಳಿ ವಿಡಿಯೋ ಇದೆ…

ಹಣೆಬರಹ ಗಟ್ಟಿಯಿತ್ತು!! ಜಸ್ಟ್ ಮಿಸ್ ಆದ ದೀಪಕ್ ಏನಂದ್ರು ಕೇಳಿ ವಿಡಿಯೋ ಇದೆ ಹಳೆ ವೈಶಮ್ಯ ಕೊಲೆಗೆ ಸಂಚು ರೂಪಿಸಲು ಕಾರಣ ನಾ..?? ಕೊಲೆ ಮಾಡಲು ಚಾಕು ಎಲ್ಲಿಂದ ತಂದಿದ್ರು ಗೊತ್ತಾ..??? ಕೊಲೆ ಸಂಚು ಕಮಿಷನರ್ ಬಿಚ್ಚಿಟ್ಟ ರಹಸ್ಯ ಇಲ್ಲಿದೆ ನೋಡಿ

ಕೊಲೆಗೆ ಸ್ಕೆಚ್ ಹಾಕಿದ್ದ ಟೀಮ್ ಅಂದರ್: ಫಿಲ್ಮ್ ಸ್ಟೈಲ್ ಕಾರ್ಯಾಚರಣೆ ಇಂಟ್ರಸ್ಟಿಂಗ್ ಕಹಾನಿ..! ಹುಬ್ಬಳ್ಳಿ: ಹೂಬಳ್ಳಿಯಂತಿರುವ ಹುಬ್ಬಳ್ಳಿಯಲ್ಲಿ ಮಾರಕಾಸ್ತ್ರಗಳು ಸಾಕಷ್ಟು ಸದ್ದು ಮಾಡುತ್ತಿವೆ. ಕ್ಷುಲ್ಲಕ ಕಾರಣಕ್ಕೆ, ಹಳೆಯ ವೈಷ್ಯಮ್ಯಕ್ಕೆ ಮನುಷ್ಯ ಮನುಷ್ಯನನ್ನೇ ಕೊಲೆ ಮಾಡುವ ಸ್ಥಿತಿಗೆ ಮಾನಸಿಕ ಕ್ರೌರ್ಯ ಬಂದು ನಿಂತಿದೆ. ಹಳೆಯ ವೈಷಮ್ಯಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ ಗ್ಯಾಂಗ್ ಅನ್ನು ಫಿಲ್ಮ್ ಸ್ಟೈಲ್ ನಲ್ಲಿ ಹೆಡೆಮುರಿ ಕಟ್ಟುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಸ್ತಿವಿ ನೋಡಿ..ಹೀಗೆ ಪೋಲಿಸ್ ಠಾಣೆಯ ಮಂದೆ ನಿಂತುರುವ ಈ ವ್ಯಕ್ತಿಯ ಹೆಸರು ದೀಪಕ್ ಧಾರವಾಡ. ಈತನನ್ನೇ ಕೊಲೆ ಮಾಡಲು ಗ್ಯಾಂಗ್ ವೊಂದು ಹೊಂಚು ಹಾಕಿ ಕುಳಿತಿತ್ತು. ಈ ಪ್ರಕರಣ ಗಮನಕ್ಕೆ ಬರುತ್ತಿದ್ದಂತೆಯೇ ಆ್ಯಕ್ಟಿವ್ ಆಗಿರುವ ಹಳೇ ಹುಬ್ಬಳ್ಳಿಯ ಪೊಲೀಸರು ಆರು ಜನರನ್ನು ಮಾರಾಕಸ್ತ್ರ ಸಮೇತ ವಶಕ್ಕೆ ಪಡೆದಿದ್ದಾರೆ‌. ಹೌದು.. ಅಪ್ರಾಪ್ತ ಬಾಲಕ ಸೇರಿ ಹಳೇ ಹುಬ್ಬಳ್ಳಿಯ ನಿವಾಸಿಗಳಾದ ಮಂಜುನಾಥ ಪಾಂಚಾನ, ಪವನ ಗಬ್ಬೂರ, ವಿನಾಯಕ ದುಂಡಿ, ನಾಗರಾಜ್ ಮಿರಜಕರ್, ರಾಜಪ್ಪ ಹನುಮನಹಳ್ಳಿ ಬಂಧಿತ ಆರೋಪಿಗಳಾಗಿದ್ದು, ಇನ್ನೊರ್ವ ಆರೋಪಿ ಗಣೇಶ್ ಬಿಲಾನಾ ಎಂಬಾತ ತಲೆಮರೆಸಿಕೊಂಡಿದ್ದಾನೆ. ಜೂನ್ 19ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸ್ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಗರದ ತಿಮ್ಮಸಾಗರ ಓಣಿಯಲ್ಲಿ ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಎರಡು ಬೈಕ್, ಆಟೋರಿಕ್ಷಾ, 2 ತಲ್ವಾರ್,2 ಚಾಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ತೀವ್ರಗೊಂಡಿದೆ.‌ ಈ ಬಗ್ಗೆ ದೀಪಕ್ ಧಾರವಾಡ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾನೆ. ದೀಪಕ್ ಧಾರವಾಡ (ದೂರು ದಾಖಲಿಸಿದವರು)ಜೂನ್ 19 ರಂದು ರಾತ್ರಿ ಸಿದ್ಧಾರೂಢರ ಮಠದ ಬಳಿಯಲ್ಲಿ ತಂಡವೊಂದು ಸಂಶಯಾಸ್ಪದವಾಗಿ ಓಡಾಡುತ್ತಿರುವ ಮಾಹಿತಿಗಳು ಲಭ್ಯವಾಗಿತ್ತು. ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರ್ ನೇತೃತ್ವದ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ, ಮೂವರನ್ನು ಬಂಧಿಸಿತ್ತು, ಅವರನ್ನು ವಿಚಾರಣೆ ನಡೆಸಿದಾಗ ಕೊಲೆಗೆ ಸಂಚು ರೂಪಿಸಿರುವುದಾಗಿ ಬಂಧಿತರು ತಿಳಿಸಿದ್ದಾರೆ. ಈ ಬಗ್ಗೆ ಕಮೀಷನರ್ ಮಾಹಿತಿ ನೀಡಿದ್ದಾರೆ. ರೇಣುಕಾ ಸುಕುಮಾರ್(ಪೊಲೀಸ್ ಆಯುಕ್ತರು)ಒಟ್ಟಿನಲ್ಲಿ ಹಳೆಯ ವೈಷಮ್ಯಕ್ಕೆ ಕೊಲೆ ಮಾಡಲು ಸಂಚು ರೂಪಿಸಿದ್ದು, ಪೊಲೀಸರ ಕಾರ್ಯಾಚರಣೆಯಿಂದ ಗ್ಯಾಂಗ್ ಮಟ್ಟ ಹಾಕಲಾಗಿದ್ದು, ಈ ಬಗ್ಗೆ ಪೊಲೀಸ್ ಕಮೀಷನರೇಟ್ ಮತ್ತಷ್ಟು ತನಿಖೆ ನಡೆಸುತ್ತಿದ್ದು, ಮತ್ತಷ್ಟು ಸತ್ಯ ಬೆಳಕಿಗೆ ಬರಬೇಕಿದೆ.

Share News

About Shaikh BigTv

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *