ಜೂನ್ 3 ರಂದು ನಗರದಲ್ಲಿ ಸೈಕಲ್ ಜಾಥಾ ಆಯೋಜನೆ
ಧಾರವಾಡ : ಅಸಾಂಕ್ರಾಮಿಕ ರೋಗಗಳ ಮತ್ತು ವಾಯು ಮಾಲಿನ್ಯ ಕುರಿತು ಜಾಗೃತಿ ಮೂಡಿಸಲು ಜೂನ್ 3 ರಂದು ವಿಶ್ವ ಬೈಸಿಕಲ್ ದಿನಾಚಾರಣೆ ಅಂಗವಾಗಿ ಆರೋಗ್ಯ ಇಲಾಖೆಯಿಂದ ಸೈಕಲ್ ಜಾಥಾ ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಟೀಲ ಶಶಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಪ್ರತಿವರ್ಷದಂತೆ ಬರುವ ಜೂನ್ 3 ರಂದು ಎಲ್ಲೆಡೆ ವಿಶ್ವ ಬೈಸಿಕಲ್ ದಿನಾಚರಣೆ ಮಾಡಲಾಗುತ್ತದೆ. ಅದರಂತೆ ಅಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೈಕಲ್ ಜಾಥಾ ಆಯೋಜಿಸಲಾಗಿದೆ.
ಜಾಥಾ ಕಾರ್ಯಕ್ರಮವು ಜೂನ್ 3 ರಂದು ಬೆಳಿಗ್ಗೆ 9 ಗಂಟೆಗೆ ಡಿಹೆಚ್‍ಓ ಕಚೇರಿ ಆವರಣದಿಂದ ಆರಂಭವಾಗುವ ಸೈಕಲ್ ಜಾಥಾದಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಅಜಾಗರೂಕತೆ ಮತ್ತು ಉದಾಸೀನತೆಯಿಂದ ಜನ ಆರೋಗ್ಯ, ನೈರ್ಮಲ್ಯದ ಕಡೆ ಗಮನ ಹರಿಸದಿರುವುದರಿಂದ ಅಸಾಂಕ್ರಾಮಿಕ ರೋಗಗಳು ಹೆಚ್ಚುವ ಮತ್ತು ವಿಪರೀತ ವಾಹನ ಬಳಕೆ, ತ್ಯಾಜ್ಯ ಸುಡುವುದು, ಅರಣ್ಯ ನಾಶದಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ.
ಇದರ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ತಿಳುವಳಿಕೆ ನೀಡಲು ಈ ಸೈಕಲ್ ಜಾಥಾ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಟೀಲ ಶಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news




