Breaking News

ವಿದ್ಯತ್‌ ಬೆಲೆ ಏರಿಕೆ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ.ರಾಜ್ಯ ಸರಕಾರದ ವಿರುದ್ಧ ಅಕ್ರೋಶಗೊಂಡ ವ್ಯಾಪಾರಸ್ಥರು.

 ಧಾರವಾಡ:-- ನಗರದ ವಿವಿಧ ವ್ಯಾಪಾರಸ್ಥರ ಸಂಘಟನೆಗಳ ಒಕ್ಕೂಟ ವಿದ್ಯುಚ್ಛಕ್ತಿ ದರಗಳ ಏರಿಕೆಯನ್ನು ತಡೆ ಹಿಡಿದು ಪರಿಷ್ಕರಿಸಲು ಸರಕಾರಕ್ಕೆ ಆಗ್ರಹಿಸಿ ಧಾರವಾಡ ವಾಣಿಜ್ಯೋದ್ಯಮ ಸಂಘದವರು ಪ್ರತಿಭಟನೆ ಮಾಡಿದರು ಅಷ್ಟೇ ಅಲ್ಲದೆ ಇಂದು ನಗರದಲ್ಲಿ ತಮ್ಮ ಅಂಗಡಿ ಮುಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. 

 ಪೂರ್ವಾನ್ವಯವಾಗಿ ಆಕರಿಸಿದ ಬಿಲ್ಲಿನಲ್ಲಿಯ ಹೆಚ್ಚಳ ದರವನ್ನು ರದ್ದುಪಡಿಸಬೇಕು. ವಿದ್ಯುಚ್ಛಕ್ತಿ ಬಳಕೆಯ ಮೇಲಿನ ಕರವನ್ನು ಶೇ. 9 ರಿಂದ.ಶೇ 6 ರಷ್ಟು ಕಡಿಮೆ ಮಾಡುವಂತೆ ರಾಜ್ಯ ಸರಕಾರವನ್ನು ಆಗ್ರಹಸಿದರು.

  ಎಸ್ಕಾಂ ಕಂಪನಿಗಳ ನಷ್ಟವನ್ನು ಸರಕಾರವೇ ಭರಿಸುವ ಮೂಲಕ ಅಥವಾ ಸಬ್ಸಿಡಿ ಒದಗಿಸುವ ಮೂಲಕ ಕೆಇಆರ್‌ಸಿಗೆ ದರ ಪರಿಷ್ಕರಿಸಲು ಕಳಿಕೊಳ್ಳಬೇಕು,  ದರಗಳ ಏರಿಕೆಯ ಪ್ರಮಾಣ ವಿವಿಧ ಕೆಟಗರಿಗಳಲ್ಲಿ ಬೇರೆ ಬೇರೆ ಇದ್ದು ಅದರ ವ್ಯತ್ಯಾಸ ಕಡಿಮೆಯಾಗಬೇಕು . ಉದ್ದಿಮಗಳು ಬೇರೆ ಬೇರೆ ರಾಜ್ಯಗಳು ಸ್ಪರ್ಧಿಸುವಂತಿರಬೇಕು.ವಾಣಿಜ್ಯಕ್ಕೆ ಎಲ್ಲ ಕರಗಳು ಬೇಕಾಬಿಟ್ಟಿ ಹೆಚ್ಚಿಗೆ ಇರಬಹುದು ಎಂಬ ತಪ್ಪು ಕಲ್ಪನೆ ಹೋಗಬೇಕು ಎಂದು ಆಗ್ರಹಿಸಿದ್ದಾರೆ.ವಿದ್ಯತ್ ಉತ್ಪಾದನೆ,ವಿತರಿಸುವಿಕೆ ಇತ್ಯಾದಿಗಳಲ್ಲಿ ದಕ್ಷತೆ ಹೆಚ್ಚಿಸಲು ಕ್ರಮಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.

ಪತ್ರಿಭಟನೆಯ ನೇತೃತ್ವವನ್ನು ಅಧ್ಯಕ್ಷರಾದ. ಪ್ರಭು ನಡಕಟ್ಟಿ, ರವೀಂದ್ರ ಎಸ್. ಆಕಳವಾಡಿ, ಶಿವಶಂಕರ ಹಂಪಣ್ಣವರ, ಪ್ರೀಯದಶ೯ನ ಕಣವಿಯವರ, ರವಿ ಎಲಿಗಾರ, ಉದಯ ಎಂಡಿಗೇರಿ,ಸಂದೀಪ ಸಾಬಳೆ ,ವೆಂಕಟೇಶ ಬೆಡಗಬೆಟ್ಟು, ಕಾಂತೇಶ ಕುಲಕರ್ಣಿ, ವಿಜಯ. ಎನ್ ಮುಧೂಳಕರ , ನಾಗರಾಜ ದೊಡಮನಿ, ಬಲರಾಮ ಕಂದಕೂರ, ಸಂದೀಪ ಸಾಂಗಲೀಕರ , ರಾಧಾಕೃಷ್ಣ ಶಟ್ಟಿ, ನಾಗರಾಜ ಎಲಿಗಾರ,ಸಿ ವಿ ಬಳಿಗಾರ, ಲಲಿತ ಭಂಡಾರಿ ಇನ್ನಿತರರು ವಹಿಸಿದ್ದರು.

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *