Breaking News

ಹುಬ್ಬಳ್ಳಿ ಕೇಬಲ್ ಆಪರೇಟರ್ ವೈ ಯೋಹಾನ್ ನಿಧನ: ಪತ್ರಕರ್ತರಿಂದ ಸಂತಾಪ;

ಹುಬ್ಬಳ್ಳಿಯ ಕೇಬಲ್ ಆಪರೇಟರ್ ಮೂಲಕ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದ ಯೇಶಮಲ್ಲಾ ಯೋಹಾನ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ನಾಲ್ಕು ಗಂಟೆಗೆ ಗದಗ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಯೋಹಾನ ಅವರು ಇಬ್ಬರು ಗಂಡು ಮಕ್ಕಳು, ಪತ್ನಿ ಹಾಗೂ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ವೈ. ಯೋಹಾನ್ ಅವರು ವೃತ್ತಿಯಲ್ಲಿ ಟೇಲರಿಂಗ್ ಕೆಲಸ ಮಾಡುತ್ತಲೇ ಕೇಬಲ್ ವ್ಯವಹಾರಕ್ಕೆ ಇಳಿದಿದ್ದರು. ಅವರ ಕಾರ್ಯಕ್ಷಮತೆ

ಎಷ್ಟಿತ್ತೆಂದರೆ ಕೆಲವೇ ವರ್ಷಗಳಲ್ಲಿ ವೈ. ಯೋಹಾನ್ ಅವರು ಕೇಬಲ್ ಕಿಂಗ್ ಎನಿಸಿಕೊಂಡಿದ್ದರು. ಹಿರಿಯ ಪತ್ರಕರ್ತರಾದ ಬಸವರಾಜ ಆನೇಗುಂದಿ, ರಾಜು ಮುದಗಲ್, ರವಿ ಸಂಗಳಕರ, ಮೆಹಬೂಬ ಮುನವಳ್ಳಿ, ಪೂರ್ಣಿಮಾ ದುಬೆ, ಪ್ರಲ್ಲಾದ ಗೌಡ, ಮಹದೇವ, ಮಾಹವೀರ, ಸೇರಿದಂತೆ ಹಲವರು ಇವರ ಸ್ಥಳೀಯ ಕೇಬಲ್ ನ್ಯೂಸ್‌ನಲ್ಲಿ ಕೆಲಸ ಮಾಡಿದ್ದರರುಮ ಕೇಬಲ್ ವ್ಯವಹಾರದಲ್ಲಿ ಬಹುದೊಡ್ಡ ಹೆಸರು ಮಾಡಿದ್ದ ಯೋಹಾನ್ ಅವರು ಕೇಬಲ್ ವ್ಯವಹಾರದಲ್ಲಿ ಬಹಳ ವರ್ಷಗಳ ಕಾಲ ಹೆಸರು ಮಾಡಿದ್ದರು. ಇಂತಹ ಉತ್ತಮ ವ್ಯಕ್ತಿಯೋರ್ವರು ಅಗಲಿದ್ದು ನೋವುಂಟು ಮಾಡಿದೆ. ಎಂದು ಹುಬ್ಬಳ್ಳಿ ಪರ್ತಕರ್ತರು ಸಂತಾಪ ಸೂಚಿಸಿದ್ದಾರೆ.

Share News

About BigTv News

Check Also

ಕಮಿಷನರ್ ಖದರ್‌ಗೆ ಕ್ರಿಮಿನಲ್‌ಗಳಿಗೆ ನಡುಕ..! ಸಾಹೇಬರೇ ಫುಲ್ ಅಲರ್ಟ್ — ಖಾಕಿ ಮೇಲೆ ಕಲೆ ಬೀಳದಂತೆ ಕಠಿಣ ಕಾವಲು!

ರೌಡಿಗಳಿಂದ ಅಂತರ..! ಡ್ರಗ್ಸ್ ಪೆಡ್ಲರ್‌ಗಳಿಗೆ ನೋ ಎಂಟ್ರಿ — ಕ್ರಿಮಿನಲ್‌ಗಳಿಂದ ಖಾಕಿ ದೂರವಿದ್ದರೆ ಪೊಲೀಸ್ ಇಲಾಖೆ ಇನ್ನಷ್ಟು ಕ್ಲೀನ್..! ಖಾಕಿ …

Leave a Reply

Your email address will not be published. Required fields are marked *