ಧಾರವಾಡ : ವೃದ್ಧೆಯೋರ್ವಳಿಗೆ ಬೈಕ್ ನಿಂದ ಡಿಕ್ಕಿ ಹೊಡೆದು ಅಪಘಾತಕ್ಕೆ ಒಳಪಡಿಸಿ ಪರಾರಿಯಾಗಿದ್ದ ನೋಂದಣಿ ಸಂಖೆ ಇಲ್ಲದ ಬೈಕ್ ಸವಾರನನ್ನು ಪತ್ತೆ ಹಚ್ಚಿ ಬೈಕ್ ಹಾಗೂ ಆರೋಪಿಗಳನ್ನು ವಶಪಡಿಸಿಕೊಳ್ಳುವಲ್ಲಿ ಸಂಚಾರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡದ ತೇಜಸ್ವಿನಗರ ಹಾಗೂ ಗಾಂಧಿನಗರ ಹೋಗುವ ರಸ್ತೆಯಲ್ಲಿ ಬರುವ ಬಂಡೆಮ್ಮ ಗುಡಿ ಹತ್ತಿರ ನವೆಂಬರ್ 15 ರಂದು ವೃದ್ಧೆಗೆ ಬೈಕ್ ಸವಾರ ಡಿಕ್ಕಿ ಹೊಡೆದು ಪರಾರಿಯಾಗಿದ್ದು ವೃದ್ಧರ ತೀವೃ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಈ ಕುರಿತಂತೆ ಪೊಲೀಸ್ ಇನ್ಸಪೆಕ್ಟರ್ ಮಲ್ಲನಗೌಡ ನಾಯ್ಕರ್ ಅವರ ಮಾರ್ಗದರ್ಶನದಲ್ಲಿ ಎ.ಎಸ್.ಐ ವಿರೇಶ್ ಬಳ್ಳಾರಿ ಹಾಗೂ ಅವರ ತಂಡದವರಾದ ಮಹೇಶ್ ಕಿತ್ತೂರ , ಇಮಾಮ್ ಅತ್ತರ್ ಅವರು ಅಪಘಾತ ನಡೆದ ಸ್ಥಳದ ಸುತ್ತಮುತ್ತಲಿನ ಸಿ.ಸಿ.ಕ್ಯಾಮರಾಗಳನ್ನು ಸಮಗ್ರವಾಗಿ ಪರಿಶೀನೆಗೆ ಒಳಪಡಿಸಿ ಆರೋಪಿಯನ್ನು ಹಾಗೂ ಬೈಕ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಅಷ್ಟೇ ಅಲ್ಲದೆ ಬೈಪಾಸ್ ನಲ್ಲಿ ನಡೆದ ಅಪಘಾತದಲ್ಲಿ ಓವ೯ ಪೊಲೀಸ್ ಸಾವನಪ್ಪಿದ್ದರು. ಆ ವಾಹನ ಕೂಡ ಪತ್ತೆ ಹಚ್ಚಿದ್ದಾರೆ. ಈಗಾಗಲೇ ಎಂಟು ಪ್ರಕರಣಗಳನ್ನು ಎಎಸ್‌ಐ ಬಳ್ಳಾರಿ ಹಾಗೂ ಅವರ ತಂಡ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





