Breaking News

ಅಸಮಾನ್ಯ ಸಾಧನೆ ಮಾಡಿದ ಪುಟ್ಟ ಬಾಲಕಿ: ಇಂಡಿಯಾ ಬುಕ್ ಆಫ್ ರೇಕಾರ್ಡನಲ್ಲಿ ಹುಬ್ಬಳ್ಳಿ ಬಾಲಕಿ,

ಹುಬ್ಬಳ್ಳಿ : ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುವಂತ ಮಾತು ಅಕ್ಷರಶಃ ಸತ್ಯ. ಬೆಳೆಯುವ ಪ್ರತಿಭೆಗೆ ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರು ಎಂಬುವಂತೆ. ಹುಬ್ಬಳ್ಳಿ ಬಾಲಕಿಯೊಬ್ಬಳು ವಯಸ್ಸಿಗೂ ಮೀರಿದ ಸಾಧನೆ ಮಾಡುವ ಮೂಲಕ ರಾಜ್ಯದ ಜನರ ಹುಬ್ಬೇರುವಂತೆ ಮಾಡಿದ್ದಾರೆ. ಆರನೇ ವಯಸ್ಸಿನಲ್ಲಿಯೇ ಅಗಾಧವಾದ ಜ್ಞಾನ ಹೊಂದಿರುವ ಹುಬ್ಬಳ್ಳಿಯ ಹುಡುಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದ್ದಾಳೆ. ಹುಬ್ಬಳ್ಳಿಯ ವಿದ್ಯಾನಗರದ ನೇಕಾರ ಕಾಲೊನಿಯ ನಿವಾಸಿಯಾಗಿರುವ ಗಣೇಶ ಕಾಂಬಳೆ ಹಾಗೂ ಶಿಲ್ಪ ಕಾಂಬಳೆ ಅವರ ಮಗಳು. ಈಗ ತಾನೇ ಒಂದನೇ ತರಗತಿ ಹೋಗಬೇಕಿರುವ ಬಾಲಕಿ ತನ್ನ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿ ಹೆತ್ತವರಿಗೆ ಮಾತ್ರವಲ್ಲದೆ ಹುಬ್ಬಳ್ಳಿಗೂ ಕೀರ್ತಿ ತಂದಿದ್ದಾರೆ. ಸಾಲು ಸಾಲು ಪ್ರಶ್ನೆಗಳಿಗೆ ಅರಳು ಹುರಿದಂತೆ ಉತ್ತರ ಕೊಡುವ ಇವಳು ವಿಶ್ವಕೀರ್ತಿ ಗಣೇಶ ಕಾಂಬಳೆ. ಆರು ವರ್ಷದ ಬಾಲಕಿ ನೂರಾರು ಸಾಮಾನ್ಯ ಜ್ಞಾನ,ವಿಜ್ಞಾನ,ಗಣಿತ,ಸಮಾಜವಿಜ್ಞಾನ, ಶಾಸ್ತ್ರದ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ.

ಒಂದನೇ ವರ್ಷಇದ್ದಾಗಲೇ ಓದುವ ಆಸಕ್ತಿ ಹೊಂದಿದ್ದ ಈಕೆಯನ್ನು ನೋಡಿ ಪಾಲಕರು ಸೂಕ್ತ ತರಬೇತಿ ನೀಡುವ ಮೂಲಕ ಬಾಲಕಿಯ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗಿದ್ದಾರೆ. ಸುಮಾರು 300 ಜನರಲ್ ನಾಲೆಜ್ ಪ್ರಶ್ನೆಗೆ ಉತ್ತರ ನೀಡುವ ಇವಳು 3 ನಿಮಿಷ 41 ಸೆಕೆಂಡ್ ಗಳಲ್ಲಿ ಉತ್ತರಿಸುವ ಮೂಲಕ ಇಂಡಿಯಾ ಬುಕ್ ಆಫ್ ರೇಕಾರ್ಡನಲ್ಲಿ ಸಾಧನೆ ಮಾಡಿದ್ದಾಳೆ.

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *