Breaking News

ಧಾರ್ಮಿಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ.

ರಾಯಚೂರು: ಸಿಂಧನೂರು ತಾಲೂಕಿನ ಬೆಂಗಾಲಿ ಕ್ಯಾಂಪ್-2ರಲ್ಲಿ‌ ಭಾನುವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಪೋಸ್ಟ್ ವಿಚಾರವಾಗಿ ಎರಡು‌ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಒಂದು ಗುಂಪು ಧಾರ್ಮಿಕ ವಿಚಾರವಾಗಿ ಪೋಸ್ಟ್ ಮಾಡಿತ್ತು. ಇದನ್ನು ಮತ್ತೊಂದು ಕೋಮಿನವರು ಪ್ರಶ್ನಿಸಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ಉಂಟಾಗಿ ಗಲಾಟೆಯಾಗಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ‌ಸಿಂಧನೂರು ಗ್ರಾಮೀಣ ಪೊಲೀಸರು ದೌಡಾಯಿಸಿ ಎರಡು ಗಂಪನ್ನು ಚದುರಿಸಿದ್ದಾರೆ.

ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಮುಂಜಾಗ್ರತ ಕ್ರಮವಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ವಿಚಾರವಾಗಿ ಎಸ್ಪಿ ನಿಖಿಲ್ ಬಿ ದೂರವಾಣಿ ಮೂಲಕ‌ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಚಾರವಾಗಿ ಗಲಾಟೆಯಾಗಿದೆ. ಘಟನೆಯಲ್ಲಿ ಯಾರಿಗೂ ಏನು ಆಗಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ‌

Share News

About BigTv News

Check Also

ಸಚಿವ ಸಂತೋಷ್ ಲಾಡ್ ಅವರಿಗೆ ಅದ್ದೂರಿ ಗೌರವ ಸನ್ಮಾನ; ಆತ್ಮೀಯ ಭೇಟಿಯಲ್ಲಿ…

ಸಚಿವ ಸಂತೋಷ್ ಲಾಡ್ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಗೌರವ ಸನ್ಮಾನ… ಕಾಂಗ್ರೆಸ್ ಮುಖಂಡರಾದ ಫತೇಶಾ ಯಾರಗಟ್ಟಿ ಹಾಗೂ ದಾದಾಪೀರ್ ಬಳ್ಳಾರಿ ಅಬ್ಬಾಸ್ …

Leave a Reply

Your email address will not be published. Required fields are marked *