Breaking News

ಜಮ್‌ಶೆಡ್‌ಪುರದಲ್ಲಿ ವೇಗವಾಗಿ ಬಂದ ಪೊಲೀಸ್ ವಾಹನವು ಜನರ ಗುಂಪಿನ ಮೇಲೆ ಡಿಕ್ಕಿ….

ಜೇಮ್‌ಶೆಡ್‌ಪುರ: ಪೊಲೀಸ್‌ ಸಿಬ್ಬಂದಿಯೊಬ್ಬರು ಮದ್ಯ ಕುಡಿದು ವಾಹನ ಚಲಾಯಿಸಿದ್ದಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ಗುದ್ದಿಸಿ ನಾಲ್ವರಿಗೆ ಗಾಯ ಮಾಡಿರುವ ಘಟನೆ ನಡೆದಿದೆ. ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ವೇಗವಾಗಿ ಬಂದ ಪೊಲೀಸ್ ವಾಹನವು ಜನರ ಗುಂಪಿನ ಮೇಲೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ನಂತರ, ಗುಂಪು ಪೊಲೀಸ್ ಚಾಲಕನನ್ನು ಹಿಡಿದು ಥಳಿಸಿತು. ಗಾಯಗೊಂಡವರನ್ನು ಅಚಲ್ ಕುಮಾರ್, ಶುಭಂ ಸಿಂಗ್, ಅರವಿಂದ್ ಶರ್ಮಾ ಮತ್ತು ಮನೋಜ್ ಕುಮಾರ್ ರೈ ಎಂದು ಗುರುತಿಸಲಾಗಿದೆ.

ಜಾರ್ಖಂಡ್‌ನ ಉಕ್ಕಿನ ನಗರ ಎಂದು ಕರೆಯಲ್ಪಡುವ ಜೆಮ್‌ಶೆಡ್‌ಪುರದ ಸೀತಾರಾಮದೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಅತಿವೇಗದ ಪೊಲೀಸ್ ಬೊಲೆರೊ ವಾಹನವು ಮೂವರು ದಾರಿ ಹೋಕರಿಗೆ ಡಿಕ್ಕಿ ಹೊಡೆದು 4 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳೀಯರ ಸಹಾಯದಿಂದ ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಜೆಮ್‌ಶೆಡ್‌ಪುರದ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ.

Share News

About BigTv News

Check Also

ಈ ಬಾರಿಯ ಬಜೆಟ್‌ನಲ್ಲಿ ಉದ್ಯಾನ ನಗರಿ ಬೆಂಗಳೂರು ನಗರಕ್ಕೆ ಬಿಗ್ ಗಿಫ್ಟ್ ನಿರೀಕ್ಷೆ….

ಬೆಂಗಳೂರು: ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಫೆಬ್ರವರಿ 1ರಂದು 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮಾಡಲಿದೆ. ಈ …

Leave a Reply

Your email address will not be published. Required fields are marked *