ನವಲಗುಂದ : 43 ನೇ ರೈತ ಹುತಾತ್ಮ ದಿನದ ಅಂಗವಾಗಿ ನವಲಗುಂದ ಪಟ್ಟಣದಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಮಹದಾಯಿ ಕಳಸಾ ಬಂಡೂರಿ ಹೋರಾಟಕ್ಕೆ ನಾಂದಿ ಹಾಡಿದ ನವಲಗುಂದ ರೈತ ಬಂಡಾಯಕ್ಕೆ 43 ವರ್ಷ ಆಗಿದ್ದು, ಬಂಡಾಯ ನಾಡಿನಲ್ಲಿ ಹುತಾತ್ಮ ರೈತರ ವೀರಗಲ್ಲಿಗೆ ಗೌರವ ಸಲ್ಲಿಸಲಿರುವ ಅನ್ನದಾತರು ಆಗಮಿಸಲಿದ್ದಾರೆ.
ಪಟ್ಟಣದ ರೈತ ಭವನದ ಬಳಿ ಇರುವ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಗೌರವ ಸಲ್ಲಿಸಲು ರಾಜ್ಯದ ಹಲವೆಡೆಯಿಂದ ನವಲಗುಂದಕ್ಕೆ ರೈತರು ಆಗಮಿಸಲಿದ್ದು, ಸಾವಿರಕ್ಕೂ ಅಧಿಕ ರೈತರು ಸೇರುವ ನಿರೀಕ್ಷೆ ಇದೆ. ಈ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, 300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ.
ಹುಬ್ಬಳ್ಳಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡೆ ಇರುವ ವೀರಗಲ್ಲಿನ ಬಳಿ ಹೆಚ್ಚು ಜನ ಆಗಮಿಸಲಿರುವ ಹಿನ್ನೆಲೆ ಈಗಾಗಲೇ ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ 100 ಮೀಟರ್ ಗಳಷ್ಟು ಬ್ಯಾರಿಕೇಡ್ ಮೂಲಕ ವಾಹನ ಸಂಚಾರಕ್ಕೆ ನಿಷೇದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





