Breaking News

ಜಮೀನು ವಿವಾದ: ಯುವಕನ ಕೊಲೆ, ನಾಲೆಗೆ ಶವ ಎಸೆದ ಆರೋಪ

ಮಂಡ್ಯ: ಜಮೀನು ವಿವಾದ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ 30 ವರ್ಷದ ನವೀನ್ ಎಂಬ ಯುವಕನನ್ನು ಕೊಲೆ ಮಾಡಿ ಶವವನ್ನು ಸಿಡಿಎಸ್ ನಾಲೆಗೆ ಎಸೆದಿರುವ ಘಟನೆ ಡವಪುರ ತಾಲ್ಲೂಕಿನ ಕೊಳಬಾವಿ ಕಟ್ಟೆ ಬಳಿ ನಡೆದಿದೆ. ನವೀನ್ ಕಟ್ಟುಕೊಟ್ಟೇರಿ ಗ್ರಾಮದ ನಿವಾಸಿಯಾಗಿದ್ದು, ಜಮೀನಿಗೆ ನೀರು ಹಾಯಿಸುವ ವಿಚಾರವಾಗಿ ಅದೇ ಗ್ರಾಮದ ಕಾಂತರಾಜು ಜೊತೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ತಡರಾತ್ರಿ ಜಮೀನಿನ ಬಳಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ ತಿರುಗಿದಾಗ ಕಾಂತರಾಜು ನವೀನ್‌ನನ್ನು ಕೊಲೆ ಮಾಡಿ ಶವವನ್ನು ನಾಲೆಗೆ ಎಸೆದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಕೃತ್ಯದ ಬಳಿಕವೂ ಆರೋಪಿ ಯಾವುದೇ ಆತಂಕವಿಲ್ಲದೆ ಕಾರ್ಮಿಕರೊಂದಿಗೆ ಕುಳಿತು ಊಟ ಮಾಡಿ ತೆರಳಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಾಹಿತಿ ತಿಳಿದು ಕೆಆರ್‌ಎಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಲೆಯಲ್ಲಿ ನವೀನ್ ಶವಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *