Breaking News

ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಕೋರ್ಟ್‌ ಅವಕಾಶ ನೀಡಿದ್ದು ಸ್ವಾಗತಾರ್ಹ: ಪ್ರಮೋದ್ ಮುತಾಲಿಕ್

ಧಾರವಾಡ: ಕಾಶಿ ವಿಶ್ವನಾಥನ ಮಸೀದಿ ವಿವಾದ, ಜ್ಞಾನವ್ಯಾಪಿ ಮಸೀದಿ ಸಮೀಕ್ಷೆಗೆ ಕೋರ್ಟ್‌ ಅವಕಾಶ ನೀಡಿರುವುದು ಸ್ವಾಗತಾರ್ಹ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಈ ಪ್ರಕರಣ ನಡೆಯುತ್ತಿದ್ದು, ಅಲ್ಲಿನ ಮಹಿಳಾ ಮಂಡಳಿಯ ಸದಸ್ಯರು ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅನುಮತಿ ನೀಡಬೇಕೆಂದು ಅರ್ಜಿ ಜಿಲ್ಲಾಧಿಕಾರಿಗಳಿಗೆ ಬರೆದರು, ಆಗ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ ನಂತರ ಮುಸ್ಲಿಂ ಮುಖಂಡರು ಕೋರ್ಟ್‌ಗೆ ಹೋದರು, ಈಗ ಕೋರ್ಟ್ ಸರ್ವೆ ಮಾಡಲು ಅನುಮತಿ ನೀಡಿದೆ ಇದು ಸ್ವಾಗತಾರ್ಹ ಎಂದು ಹೇಳಿದರು.

ಮುಸ್ಲಿಂ ಸೌಹಾರ್ದತೆಯಿಂದ ಈ ಮಸೀದಿಯಲ್ಲಿನ ಹಿಂದೂ ದೇವತೆಗಳ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕಾಗಿತ್ತು. ಆದರೆ ಸೊಕ್ಕಿನಿಂದ ಹಠದಿಂದ ಕೋರ್ಟ್‌ಗೆ ಹೋದರು. ನ್ಯಾಯಾಲಯವು ನ್ಯಾಯ ಒದಗಿಸಿದೆ.

ಈಗ ನ್ಯಾಯ ಸಮ್ಮತವಾಗಿ ಸರ್ವೆಯಾದರೆ ಇದು ಕಾಶಿ ವಿಶ್ವನಾಥ ದೇವಸ್ಥಾನದ ಎಂಬುದು ಸ್ಪಷ್ಟವಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿಶ್ವಾಸ ವ್ಯಕ್ತಪಡಿಸಿದರು.

Share News

About BigTv News

Check Also

ದಾವಣಗೆರೆಯಲ್ಲಿ ಗಾಂಜಾ ದಂಧೆಗೆ ಖಾಕಿ ಶಾಕ್..! ನಾಲ್ವರು ಅರೆಸ್ಟ್, 2.5 ಕೆಜಿ ಗಾಂಜಾ ಸೀಜ್!

ಗಾಂಜಾ ದಂಧೆಕೋರರಿಗೆ ಆಜಾದ್ ನಗರ ಪೊಲೀಸರ ಬೇಟೆ..! ₹1.25 ಲಕ್ಷದ ಮಾಲು ವಶ, ಎರಡು ಬೈಕ್ ಜಪ್ತಿ! ದಾವಣಗೆರೆಯಲ್ಲಿ ಗಾಂಜಾ …

Leave a Reply

Your email address will not be published. Required fields are marked *