Breaking News

ಅತಿವೃಷ್ಟಿ ಬೆಳೆ ಹಾನಿ ಪರಿಹಾರಕ್ಕೆ ಅಗ್ರಹಿಸಿ ಬಿದಿಗೆ ಇಳಿದು ರೈತರ ಪ್ರತಿಭಟನೆ

ಧಾರವಾಡ: ಅತಿವೃಷ್ಟಿ ಬೆಳೆ ಹಾನಿ ಪರಿಹಾರಕ್ಕೆ ಅಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತರು ಪ್ರತಿಭಟನೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತೀಯಾದ ಮಳೆಯಿಂದ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಬೆಳೆ ಹಾನಿಯಾಗಿದೆ. ಮಳೆ ನೀರು ನಿಂತು ಬೆಳೆ ಹಾನಿಯಾಗುತ್ತಿದ್ದರು ಅಧಿಕಾರಿಗಳು ಸಮೀಕ್ಷೆ ಮಾಡುತ್ತಿಲ್ಲ ಆದ್ದರಿಂದಲೇ ನಿರಂತರ ಮಳೆಯಿಂದಾಗಿ ರೈತರು ಬಿದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬತ್ತ, ಮೆಕ್ಕೆಜೋಳ, ಸೋಯಾಬಿನ್ ಬೆಳೆ ಸೇರಿ ಮುಂಗಾರು ಬೆಳೆಗಳು ಹಾಳಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಬೆಳೆ ಹಾನಿ ಗಮನಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಕೂಡಲೇ ಮುಖ್ಯಮಂತ್ರಿಗಳು ಬೆಳೆ ಹಾನಿ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಸಮಿಕ್ಷೆಯ ವರದಿ ನಂತರ ಬೆಳೆ ಹಾನಿ ಪರಿಹಾರ ಬೀಡುಗಡೆ ಮಾಡಿ ರೈತರ ಕಷ್ಟಕ್ಕೆ ಸರ್ಕಾರ ನೇರವಾಗಬೇಕು ಎಂದು ಆಗ್ರಹಿಸಿದ್ದಾರೆ.

Share News

About BigTv News

Check Also

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿ..! ಕುತ್ತಿಗೆಗೆ ಸಿಲುಕಿದ ದಾರ, ಲ್ಯಾಬ್ ಟೆಕ್ನಿಷಿಯನ್ ದಾರುಣ ಸಾವು..!

News Audio ಸ್ಕೂಟಿಯಲ್ಲಿ ಲ್ಯಾಬ್‌ಗೆ ತೆರಳುತ್ತಿದ್ದಾಗ ಅವಘಡ | ರಸ್ತೆಯಲ್ಲೇ ತೀವ್ರ ರಕ್ತಸ್ರಾವ, ಮಾಂಜಾ ದಾರದ ಅಪಾಯಕ್ಕೆ ಮತ್ತೊಂದು ಜೀವ …

Leave a Reply

Your email address will not be published. Required fields are marked *