ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ಪಾನ್ ಶಾಪ್ ಮಾಲೀಕನ ಜೊತೆ ಹಣ ಕೊಡುವ ವಿಚಾರಕ್ಕೆ ಜಗಳ ತೆಗೆದ ಆಟೋ ಚಾಲಕ ,ಚಾಲಕ ಪಾನ್ ಶಾಪ್ ಮಾಲೀಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.ಆಗ ಮಾಲೀಕ ತನ್ನನ್ನು ಕಾಪಾಡಿಕೊಳ್ಳಲು ಪಾನ್ ಶಾಪ್ ನಲ್ಲಿ ಬಳಸುವ ಕತ್ತರಿಯಿಂದ ಆಟೋ ಚಾಲಕನ ಹೊಟ್ಟೆಗೆ ಚುಚ್ಚಿದ ಘಟನೆ ಗೋಕುಲ್ ರೋಡ್ ನಲ್ಲಿ ಆಗಿದೆ.
ಗೋಕುಲ್ ರೋಡ್ ನಲ್ಲಿರುವ ಹರ್ಷಾ ಪಾನ್ ಶಾಪ್ ನಲ್ಲಿ ಇಂದು ಮಧ್ಯಾಹ್ನ ಆಟೋ ಚಾಲಕ ಸೋಮು ಎಂಬಾತ ಕುಡಿದ ಮತ್ತಿನಲ್ಲಿ ಹಣ ಕೊಡುವ ವಿಚಾರಕ್ಕೆ ಜಗಳ ತೆಗೆದು,ಪಾನ್ ಶಾಪ್ ನಲ್ಲಿದ್ದ ವೃದ್ಧನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.
ಆಗ ವೃದ್ಧ ತನ್ನ ರಕ್ಷಣೆಗಾಗಿ ಪಾನ್ ಶಾಪ್ ನಲ್ಲಿ ಎಲೆ ಕತ್ತರಿಸಲು ಬಳಸುವ ಕತ್ತರಿಯಿಂದ ಆಟೋ ಚಾಲಕನ ಹೊಟ್ಟೆಗೆ ಚುಚ್ಚಿದ್ದಾನೆ.ಪರಿಣಾಮ ಆಟೋ ಚಾಲಕ ಗಾಯಗೊಂಡಿದ್ದಾನೆ.ಕೊಡಲೇ ಇನ್ನುಳಿದ ಆಟೋ ಚಾಲಕರು ಸೋಮುನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ…

bigtvnews | Hubli Dharwad News | Kannada News | Karnataka News Hubli News | News In Hubli | Local news





