ಧಾರವಾಡ : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಭೀಮರಾವ್ ಎಚ್ ಮೋರೆ ಸೇವಾ ನಿವೃತ್ತಿಯ ಬೀಳ್ಕೊಡುಗೆ ಹಾಗೂ ಭೀಮರಾವ್ ಎಚ್ ಮೋರೆ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ನಳಿನಿ ಬೆಂಗೇರಿ ಮಾತನಾಡಿ, ಕಳೆದ 30 ವರ್ಷಗಳಿಂದ ಇತಿಹಾಸ ಪ್ರಾಧ್ಯಾಪಕರಾಗಿ ಬಿ.ಎಚ್. ಮೋರೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮವಹಿಸಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು.
ಉತ್ತಮ ವಾಕ್ ಚಾತುರ್ಯ ಹೊಂದಿದ ಬಿ.ಎಚ್. ಮೋರೆ ಅವರು ಪಾಠಗಳನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ವಿವರಿಸುತ್ತಿದ್ದರು. ವಿದ್ಯಾರ್ಥಿಗಳ ಕಷ್ಟ ಸುಖದಲ್ಲಿ ಭಾಗಿಯಾಗುವುದಲ್ಲದೇ ಸಹ ಸಿಬ್ಬಂದಿಯೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ಸ್ನೇಹಮಯ ಜೀವಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಹು ಶಿಸ್ತಿನ ಶಿಕ್ಷಕ ಬಿ.ಎಚ್. ಮೋರೆ ಅವರನ್ನು ಇಂದು ಬಿಳ್ಕೊಡುಗೆ ನೀಡುತ್ತಿರುವುದು ತುಂಬಾ ಎಂದು ತಿಳಿಸಿದರು. ನೋವಾಗಿದೆ
ಡಾ.ಅರುಣ್ ಕಳೋಲಿಕ ಮಾತನಾಡಿ, ಡಾ.ಬಿ.ಎಚ್ ಮೋರೆ ಅವರು ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾಗಿದ್ದರು, ಎನ್ ಎಸ್ ಎಸ್ ಸಂಯೋಜಕರಾಗಿ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಮುಂಡಗೋಡ ಸರ್ಕಾರ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಬಿಸಿ ಯಲ್ಲಾಪುರ, ಧಾರವಾಡದಲ್ಲಿ 15 ವರ್ಷ ಸೇರಿದಂತೆ 30 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೇವಾ ನಿವೃತ್ತಿ ಹೊಂದಿದ ಪ್ರಾಧ್ಯಾಪಕ ಡಾ. ಭೀಮರಾವ್ ಎಚ್ ಮೋರೆ ಹಾಗೂ ಅವರ ಪತ್ನಿ ಇಂದುಮತಿ ಮೋರೆ ಅವರಿಗೆ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





