Breaking News

ಟೊಮೆಟೊ ಕಳ್ಳನ ಬಂದನ…

ಚಿಕ್ಕೋಡಿ (ಬೆಳಗಾವಿ): ಕಳೆದ ಎರಡು ತಿಂಗಳಿಂದ ಟೊಮೆಟೊ ಬೆಲೆ ಗಗನಕ್ಕೇರಿದ್ದು, 200 ರೂ. ಗಡಿ ಮುಟ್ಟಿದೆ. ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿರುವ ಟೊಮೆಟೊ, ರೈತರಿಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತಿದೆ. ಆದರೆ ಇತ್ತೀಚೆಗೆ ತೋಟಕ್ಕೆ ನುಗ್ಗಿ ಟೊಮೆಟೊ ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಡುವೆ ರೈತರೋರ್ವರು ಟೊಮೆಟೊ ಕಳ್ಳನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ರಾಯಭಾಗ ತಾಲೂಕಿನ ಸಿದ್ದಾಪೂರ ಗ್ರಾಮದ ಬುಜಪ್ಪಾ ಗಾಣಗೇರ ಎಂಬುವರು ಟೊಮೆಟೊ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಹಾರೂಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯ ರಾಯಭಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ರೈತರಾದ ಕುಮಾರ ಗುಡೋಡಗಿ ಎಂಬುವರು ತಮ್ಮ ಅರ್ಧ ಎಕರೆ ಹೊಲದಲ್ಲಿ ಟೊಮೆಟೊ ಬೆಳೆದಿದ್ದರು. ಈ ಟೊಮೆಟೊವನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿ ಉತ್ತಮ ಆದಾಯ ಪಡೆಯುತ್ತಿದ್ದರು. ಈ ನಡುವೆ ಕಳೆದ 20 ದಿನದಿಂದ ಜಮೀನಿನಲ್ಲಿ ಬೆಳೆದ ಟೊಮೆಟೊ ಕಳ್ಳತನವಾಗುತ್ತಿರುವುದು ರೈತನನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಈ ಹಿನ್ನೆಲೆ ಜಮೀನನಲ್ಲಿ ಕಾದು ಕುಳಿತ ರೈತ ಕೊನೆಗೂ ಟೊಮೆಟೊ ಕಳ್ಳನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Share News

About BigTv News

Check Also

Featured Video Play Icon

ಅಂಜಲಿ ಅಂಬಿಗೇರ ಮನೆಗೆ ಮೂಜಗು ಸ್ವಾಮೀಜಿ, ಶಾಸಕ ಟೆಂಗಿನಕಾಯಿ ಭೇಟಿ…

ಹುಬ್ಬಳ್ಳಿ: ನಿನ್ನೆ ಧಾರುಣವಾಗಿ ಕೊಲೆಯಾದ ಅಂಜಲಿ ಅಂಬಿಗೇರ ಅವರ ಮನೆಗೆ ಮೂರುಸಾವಿರ ಮಠದ ಸ್ವಾಮಿಜಿ, ರುದ್ರಾಕ್ಷಿಮಠದ ಸ್ವಾಮೀಜಿ ಹಾಗೂ ಶಾಸಕ …

Leave a Reply

Your email address will not be published. Required fields are marked *

You cannot copy content of this page