Breaking News

ಕೇಳುಗರ ಮನಗೆದ್ದ ಪಂ.ಬಾಪು ಪದ್ಮನಾಭ ಅವರ ಕೊಳಲುವಾದ


ಧಾರವಾಡ : ಸಂಯೋಜಕರಾದ ಶ್ರೀಪಾದ ಹೆಗಡೆ ಧಾರವಾಡದಂತಹ ಸಾಂಸ್ಕೃತಿಕ ನಗರಿಯಲ್ಲಿ ವಿವಿಧ ರೀತಿಯ ವೈವಿಧ್ಯಮಯ ಸಂಗೀತ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ಪ್ರತಿಷ್ಠಾನದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಮತ್ತು ಬಾಪು ಪದ್ಮನಾಭ ಅವರ ಕೊಳಲುವಾದನ ಕೇಳುಗರ ಮನಗೆದ್ದಿದ್ದು ಅವರ ಸಂಗೀತ ಸಾಧನೆಗೆ ಸಿಗುವ ಫಲ ಎಂದು ಖ್ಯಾತ ಸಂಗೀತ ಸಂಯೋಜಕರು ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ ಪಂ. ಶ್ರೀಪಾದ ಹೆಗಡೆಯವರು ಹೇಳಿದರು.
ಅವರು ನಗರದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ವತಿಯಿಂದ ರಾಷ್ಟçಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರು, ಕೊಳಲುವಾದಕರಾದ ಪಂ.ಬಾಪು ಪದ್ಮನಾಭ ಅವರಿಂದ ಕೊಳಲು ವಾದನ-2023 “ಸಂಗೀತ ಚಿಂತನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಧಾರವಾಡದಲ್ಲಿ ಹಲವಾರು ಸಾಂಸ್ಕೃತಿಕ ಸಂಸ್ಥೆಗಳಿದ್ದು ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಕಲಾ ಚಟುವಟಿಕೆಗಳು ವಿಭಿನ್ನವಾಗಿವೆ. ಈ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ತಿಳಿದು ತುಂಬಾ ಸಂತೋಷವಾಗಿದೆ. ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ವಯೋಲೀನ್ ವಾದಕರಾದ ಪಂ. ವಾದಿರಾಜ ನಿಂಬರಗಿಯವರು ಮಾತನಾಡಿ ಧಾರವಾಡದಲ್ಲಿರುವ ಎಷ್ಟೋ ಸಂಸ್ಥೆಗಳು ಕೇವಲ ಸುಗಮಸಂಗೀತ, ನೃತ್ಯ ಸಂಗೀತಸಂಜೆಯಂತಹ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದ್ದರೆ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ಶಾಸ್ತೀಯ ಸಂಗೀತ, ವಿವಿಧ ವಿಭಿನ್ನ ವಾದ್ಯಸಂಗೀತ, ನಾಟಕ, ರಂಗಸಸಂಗೀತದಂತಹ ವೇದಿಕೆಗಳಿಂದ ಕಡೆಗಣಿಸಲ್ಪಡುತ್ತಿರುವ ವಿಶಿಷ್ಟವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವುದು ನಿಜಕ್ಕೂ ಅಭಿನಂದನೀಯವಾದದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಳಲುವಾದನ ಕಾರ್ಯಕ್ರಮ ನೀಡಿ ಮಾತನಾಡಿದ ಪಂ. ಬಾಪು ಪದ್ಮನಾಭ ಮಾತನಾಡಿ ಧಾರವಾಡದಂತಹ ಸಾಂಸ್ಕೃತಿಕ ನಗರಿಯಲ್ಲಿ ವಾದ್ಯ ಸಂಗೀತ ಕಾರ್ಯಕ್ರಮ ನೀಡಿದ್ದು ತುಂಬಾ ಖುಷಿ ನೀಡಿದೆ. ಈ ಪ್ರತಿಷ್ಠಾನದ ಮುಂದಿನ ಕಾರ್ಯಕ್ರಮಗಳಿಗೂ ನಮ್ಮ ಬೆಂಬಲವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಗೀತಗಾರರಾದ ಸದಾಶಿವ ಮರ್ಜಿ, ರೋಟರಿ ಕ್ಲಭ್ ಧಾರವಾಡ ಸೆಂಟ್ರಲ್ ಅಧ್ಯಕ್ಷರಾದ ಶ್ರೀ ಸುನೀಲ ಬಾಗೇವಾಡಿ, ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಮಾತನಾಡಿದರು. ಗೌರವಾದ್ಯಕ್ಷರಾದ ಕೆ.ಎಚ್ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಂತರ ನಡೆದ ಪಂ. ಬಾಪು ಪದ್ಮನಾಭ ಅವರ ಕೊಳಲುವಾದನ ಶ್ರೋತೃಗಳ ಮನಸೂರೆಗೊಂಡಿತು. ಡಾ. ಉದಯ ಕುಲಕರ್ಣಿ ತಬಲಾ ಸಾಥ ನೀಡಿದರು.
ನಂತರ ಸಂಗೀತ, ಶೈಕ್ಷಣಿಕ ಮತ್ತು ವಿವಿಧ ಕ್ಷೇತ್ರಗಳಲ್ಲಿನ 25 ಸಾಧಕರಾದ ಸಾಮಾಜಿಕ ಕಾರ್ಯಕರ್ತರಾದ ಸೌರಭ ಆನಂದ ಚೋಪ್ರಾ, ವಿದ್ಯಾರಣ್ಯ ಶಾಲೆಯ ನಿವೃತ್ತ ಶಿಕ್ಷಕರಾದ ಸುಭಾಸ ಮಿರಜಕರ, ಕರಡಿಗುಡ್ಡದ ಪದವೀಧರ ಶಿಕ್ಷಕರಾದ ಮಂಜು ಪೂಜಾರ, ಹುಬ್ಬಳ್ಳಿಯಲ್ಲಿ ವಾರ್ಡನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಪಾದ ಹುಲಕೋಟಿ, ಶಿಕ್ಷಕಿಯರಾದ ಜಯಶ್ರೀ ದೊಡಮನಿ, ಕುಮುದ್ವತಿ ಭರಮಗೌಡರ, ಶಶಿಕಲಾ ರಾಠೋಡ, ರಜಿಯಾ ದಿಲಶಾದ, ನವನಗರ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕಿ ಶ್ರೀಮತಿ ಗೀತಾ.ಎಸ್. ಓಂಕಾರಿ, ಗಾಯಕಿ ಕುಮಾರಿ ಶ್ರೀರಕ್ಷಾ ಉಚಿಲಾ,ನಿವೃತ್ತ ಅಭಿಯಂತರರಾದ ಎಮ್.ಜಿ.ಕುಲಕರ್ಣಿ, ಯುವನೃತ್ಯ ಕಲಾವಿದರಾದ ಕುಮಾರಿ ತನುಶ್ರೀ ಪೂಜಾರ, ಹುಬ್ಬಳ್ಳಿಯ ಸಮಾಜ ಸೇವಕರಾದ ಚಂದ್ರಕಾಂತ ಪೂಜಾರ, ಪಿ.ಡಬ್ಲ್ಯೂಡಿಯ ನಿವೃತ್ತ ವ್ಯವಸ್ಥಾಪಕರಾದ ಆರ್.ಬಿ ಹಬೀಬ, ನಿವೃತ್ತ ಅಭಿಯಂತರರಾದ ರಾಚೋಟೆಪ್ಪ ಗೌಡರ, ಉದ್ಯಮಿಗಳಾದ ಅನಿಲ ನೆಲಿವಿಗಿ, ಅಂತರಾಷ್ಟ್ರೀಯ ಶೂಟರ್ ಆದ ಕುಮಾರಿ ಜ್ಯೋತಿ ಸಣ್ಣಕ್ಕಿ, ಯುವ ತಬಲಾವಾದಕರಾದ ಕುಮಾರ ಕಾರ್ತಿಕ ಕಣವಿ,ಹುಬ್ಬಳ್ಳಿಯ ನಿರೂಪಕಿ ಕುಮಾರಿ ಸಂಜನಾ ನ್ಯಾಮತಿ, ಭರತನಾಟ್ಯ ಕಲಾವಿದೆಯಾದ ಶ್ರೀಮತಿ ಅಂಕಿತಾ ರಾವ್, ಕಲಾವಿದರಾದ ಅಶೋಕ ಚವ್ಹಾಣ ಸಮಾಜ ಸೇವಕರಾದ ಸುಜಾತಾ ಸಾಂಬ್ರಾಣಿ, ಕಸಾಪ ಅಧ್ಯಕ್ಷ ಮಹಾಂತೇಶ ನರೇಗಲ್, ಸುಕನ್ಯಾ ಬಡಿಗೇರ, ಇರ್ಪಾನ್ ಎಮ್ ಎಫ್, ಅನ್ನಪೂರ್ಣ ಪೂಜೇರಿ ಇವರಿಗೆ ಸನ್ಮಾನಿಸಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎ.ಎಂ ಸೈಯದ್, ಶ್ರೀಶೈಲ ಚಿಕನಳ್ಳಿ, ಬಿ ಸಿ ಮೇಸ್ತಿç, ಕೃಷ್ಣಮೂರ್ತಿ ಗೊಲ್ಲರ, ಫೀರೋಜ ಗುಡೇನಕಟ್ಟಿ, ಡಾ. ಮಹೇಶ ಬಾಳಗಿ, ಲತಾ ಮಳ್ಳೂರು, ಯಲ್ಲಪ್ಪ ಸಮಗಾರ ಡೆಪ್ಯೊಟಿ ರೆಜಿಸ್ಟರ್ ಗಣೇಶ್ ಕುಂದರಗಿ ಜೂ, ಇಂಜಿನಿಯರ್ ಬಸವರಾಜ್ ಕುಂದರಗಿ, ರೇಷ್ಮೆ ಅಧಿಕಾರಿಗಳು ರಮೇಶ್ ದೇವಮಾನೆ ಮಲ್ಲೇಶ್ ಸಾಮ್ರಾಣಿ ಅರುಣ್ ಕುಂದರಗಿ ವಿನೋದಾ ಉಪ್ಪಲದಿನ್ನಿ ನಾಗೇಶ್ ಮೇದಾರ್, ಮೋಹನ್ ಕುಲಕರ್ಣಿ ಮತ್ತು ಸುನಿತಾ ಕುಲಕರ್ಣಿ ಇದ್ದರು. ಪ್ರೇಮಾನಂದ ಶಿಂಧೆ ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಸುರೇಶ ಬೆಟಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು. ಮಾರ್ತಾಂಡಪ್ಪ ಕತ್ತಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಫರಾಸ ವಂದಿಸಿದರು.

Share News

About BigTv News

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕುನಿಂದ ಕೊಲೆ ಯತ್ನ ನಗರದಲ್ಲಿ …

Leave a Reply

Your email address will not be published. Required fields are marked *