Breaking News

2 ಗಂಟೆಗೆ ಸ್ಪಂದನಾ ಅಂತಿಮ ಯಾತ್ರೆ ಆರಂಭ; ಬಿ.ಕೆ. ಹರಿಪ್ರಸಾದ್ ಮಾಹಿತಿ

ಬೆಂಗಳೂರು: ಇಂದು ಮಧ್ಯಾಹ್ನ 2 ಗಂಟೆಗೆ ಸ್ಪಂದನ ಅವರ ಅಂತಿಮ ಯಾತ್ರೆ ಆರಂಭವಾಗುತ್ತದೆ. 3:30ಕ್ಕೆ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಬಿ.ಕೆ. ಹರಿಪ್ರಸಾದ್ ಮಾಹಿತಿ ನೀಡಿದರು.

ಮಾಧ್ಯಮ ಪ್ರತಿನಿಧಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಹರಿಪ್ರಸಾದ್, ‘ಬೇರೆಬೇರೆ ಮಾಧ್ಯಮಗಳು ಅಂತಿಮ ಯಾತ್ರೆ ಬಗ್ಗೆ ಹಲವು ರೀತಿಯಲ್ಲಿ ವರದಿ ಮಾಡಿದ್ದಾರೆ. ಅದಕ್ಕಾಗಿಯೇ ಸ್ಪಷ್ಟನೆ ನೀಡುತ್ತಿದ್ದೇನೆ. ಇಂದು ಮಧ್ಯಾಹ್ನ 2 ಗಂಟೆಗೆ ಸ್ಪಂದನ ಅವರ ಅಂತಿಮ ಯಾತ್ರೆ ಆರಂಭವಾಗುತ್ತದೆ. 3:30ಕ್ಕೆ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಭಾವುಕರಾದ ಹರಿಪ್ರಸಾದ್,ಕಣ್ಣೀರುಹಾಕುತ್ತಾ ಮಾಧ್ಯಮಗಳ ಜತೆ ಮಾತನಾಡಿದರು.

ಅಂತಿಮ ದರ್ಶನಕ್ಕೆ ಜನಸಾಗರ
ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಂತಿಮ ದರ್ಶನ ಪಡೆಯಲು ಮಲ್ಲೇಶ್ವರದ ಬಿ.ಕೆ. ಶಿವರಾಂ ನಿವಾಸದತ್ತ ನೂರಾರು ಜನ ಬರುತ್ತಿದ್ದಾರೆ. ಗಂಟೆಗಂಟೆಗೂ ದರ್ಶನಕ್ಕೆ ಬರುವವರ ಸಂಖ್ಯ ಹೆಚ್ಚುತ್ತಿದೆ. ಇಂದು ಮುಂಜಾನೆಯಿಂದಲೂ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಸಾಲುಗಟ್ಟಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಜತೆಗೆ ಅಭಿಮಾನಿಗಳು, ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಬಿ.ಕೆ. ಹರಿಪ್ರಸಾದ್ ನಿವಾಸದತ್ತ ಆಗಮಿಸುತ್ತಿದ್ದಾರೆ

Share News

About BigTv News

Check Also

ಮರಳು ದಂಧೆಯಲ್ಲಿ ಖಾಕಿಯ ‘ಮಂತ್ಲಿ’ ಆಟ? ಠಾಣೆಯಲ್ಲೇ ಲಾರಿ, ಮೇಲ್ವಿಚಾರಣೆ ಯಾರದ್ದು..?

ಧಾರವಾಡ–ಹುಬ್ಬಳ್ಳಿ: ಅಕ್ರಮ ಮರಳು ಸಾಗಾಟದ ಲಾರಿಗಳನ್ನು ಬಿಡಿಸಲು ಲಂಚದ ಬೇಡಿಕೆ ಇಟ್ಟ ಆರೋಪದಲ್ಲಿ ಕೆಳಹಂತದ ಪೊಲೀಸ್ ಸಿಬ್ಬಂದಿ ಲೋಕಾಯುಕ್ತರ ಬಲೆಗೆ …

Leave a Reply

Your email address will not be published. Required fields are marked *