Breaking News

ಮುಂಚಿತವಾಗಿ ಟೆಂಡರ್ ಕರೆದು ದುಡ್ಡಿಲ್ಲದೇ ಹಿಂದಿನ ಸರಕಾರ ಬಿಟ್ಟು ಹೋಗಿದೆ ಸಂತೋಷ್ ಲಾಡ್

ಧಾರವಾಡ: ಗುತ್ತಿಗೆದಾರರಿಂದ ಕಾಂಗ್ರೆಸ್ ಸರ್ಕಾರ ಕಮಿಷನ್ ಪಡೆದುಕೊಳ್ಳುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ನಾವಿನ್ನೂ ಯಾವುದೇ ಹೊಸ ಟೆಂಡರ್ ಕರೆದೇ ಇಲ್ಲ. ಹೊಸ ಕಾಮಗಾರಿ ಆರಂಭಿಸಿದ್ದರೆ ಈ ಪ್ರಶ್ನೆ ಉದ್ಭವಿಸುತ್ತಿತ್ತು. ಇದರಲ್ಲಿ ಸತ್ಯ ಇದೆ ಎನ್ನಬಹುದಿತ್ತು. ಆದರೆ, ಬಿಜೆಪಿ ಮುಂಚಿತವಾಗಿ ಟೆಂಡರ್ ಕರೆದು ದುಡ್ಡಿಲ್ಲದೇ ಬಿಟ್ಟು ಹೋಗಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಯಾರು ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದನ್ನು ನೋಡಬೇಕಿದೆ. ಆಯಾ ಇಲಾಖಾವಾರು ಕೆಲಸ ನೋಡಿ ಬಿಲ್ ಬಿಡುಗಡೆ ಮಾಡಲಾಗುತ್ತದೆ. ಈ ರೀತಿ ಸುಮ್ಮನೆ ಆಪಾದನೆ ಮಾಡೋದು ಸರಿಯಲ್ಲ. ಹಳೆಯ ಬಿಲ್ಲು ನಾವು ಕೊಟ್ಟೇ ಕೊಡುತ್ತೇವೆ. ಈಗಾಗಲೇ ಅನೇಕ ಜಿಲ್ಲೆಯಲ್ಲಿ ಬಾಕಿ ಬಿಲ್ ಬಿಡುಗಡೆಯಾಗುತ್ತಿವೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬರುವ ಬಾಕಿ ಅನುದಾನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ. 2018ರಿಂದ ಇಲ್ಲಿಯವರೆಗೂ ಅನುದಾನ ಬಂದಿಲ್ಲ. ಹೀಗಾಗಿ 230 ಕೋಟಿ ಅನುದಾನ ಬರಬೇಕಿದೆ. ಇದಕ್ಕೆ ಸಂಬಂಧಿಸಿದ ಸಚಿವರು ಮತ್ತು ಸಿಎಂ ಗಮನಕ್ಕೂ ತಂದಿದ್ದೇನೆ. ಮುಂದೆ ಹಣಕಾಸು ಇಲಾಖೆ ಅನುಮತಿ ಪಡೆದು ಅನುದಾನ ನೀಡಲಾಗುವುದು ಎಂದರು.

Share News

About BigTv News

Check Also

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿ..! ಕುತ್ತಿಗೆಗೆ ಸಿಲುಕಿದ ದಾರ, ಲ್ಯಾಬ್ ಟೆಕ್ನಿಷಿಯನ್ ದಾರುಣ ಸಾವು..!

News Audio ಸ್ಕೂಟಿಯಲ್ಲಿ ಲ್ಯಾಬ್‌ಗೆ ತೆರಳುತ್ತಿದ್ದಾಗ ಅವಘಡ | ರಸ್ತೆಯಲ್ಲೇ ತೀವ್ರ ರಕ್ತಸ್ರಾವ, ಮಾಂಜಾ ದಾರದ ಅಪಾಯಕ್ಕೆ ಮತ್ತೊಂದು ಜೀವ …

Leave a Reply

Your email address will not be published. Required fields are marked *