ನಗರದಲ್ಲಿ ಹಾಫ್ ಹೆಲ್ಮೆಟ್ ವಿರುದ್ಧ ಅಭಿಯಾನವನ್ನು ಜಿಲ್ಲಾ ಪೊಲೀಸ್ ಇಲಾಖೆ ಮುಂದುವರೆಸಿದೆ. ಶುಕ್ರವಾರ ಟಿ.ಶೀನಪ್ಪ ಶೆಟ್ಟಿ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಹಾಫ್ ಹೆಲ್ಮೆಟ್ ವಿರುದ್ದ ಅಭಿಮಾನ ನಡೆಸಲಾಯಿತು.
ಎಸ್ಪಿ ಮಿಥುನ್ ಕುಮಾರ್ ತಾವೇ ರಸ್ತೆಯಲ್ಲಿ ನಿಂತು ದ್ವಿಚಕ್ರ ವಾಹನ ಸವಾರರು ಹಾಫ್ ಹೆಲ್ಮೆಟ್ ಧರಿಸಿಕೊಂಡು ಬರುತ್ತಿದ್ದವರನ್ನು ಕರೆಯಿಸಿ ಈ ರೀತಿಯ ಅರ್ಧ ಹೆಲ್ಮೆಟ್ ಹಾಕಿಕೊಂಡು ವಾಹನ ಸವಾರಿ ಮಾಡಬಾರದು. ಅಪಘಾತವಾದಾಗ ಅರ್ಧ ಹೆಲ್ಮೆಟ್ ನಿಮ್ಮ ತಲೆಯನ್ನು ರಕ್ಷಿಸುವುದಿಲ್ಲ. ಇದರಿಂದ ಇನ್ನು ಮುಂದೆ ಅರ್ಧ ಹೆಲ್ಮೆಟ್ ಧರಿಸಬೇಡಿ ಎಂದು ತಿಳಿಹೇಳಿದರು. ವಾಹನ ಸವಾರರು ಧರಿಸಿದ್ದ ಹೆಲ್ಮೆಟ್ ಅನ್ನು ವಶಕ್ಕೆ ಪಡೆದು, ಸವಾರರನ್ನು ಕಳುಹಿಸಿಕೊಟ್ಟರು
ತಮ್ಮ ಹಿರಿಯ ಅಧಿಕಾರಿಗಳೇ ರಸ್ತೆಗಿಳಿದು ಅರಿವು ಮೂಡಿಸುತ್ತಿದ್ದಂತೆಯೇ ನಗರದ ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನ ಸವಾರರನ್ನು ತಡೆದು ಎಸ್ಪಿ ಮಿಥುನ್ ಕುಮಾರ್ ಅವರ ಬಳಿ ಕಳುಹಿಸುತ್ತಿದ್ದರು. ಈ ವೇಳೆ ವಾಹನ ಸವಾರರು ಸೀದಾ ಬಂದು ಅವರೇ ತಮ್ಮ ಕೈಯ್ಯಾರೆ ಅರ್ಧ ಹೆಲ್ಮೆಟ್ ತೆಗೆದು ಹೆಲ್ಮೆಟ್ ರಾಶಿಯಲ್ಲಿ ಹಾಕಿ ಹೋದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





