ಬೆಂಗಳೂರು: ರಾಜ್ಯಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಚೌತಿಯಲ್ಲಿ ಗೌರಿ ಗಣೇಶ ಮೂರ್ತಿಗಳ ದರ ಹೆಚ್ಚಾಗಿದ್ದು, ಅಲಂಕಾರಿಕ ವಸ್ತು, ಸರಕು ಸಾಗಣೆ ಕಾರಣದಿಂದ ಶೇ. 10 ರಿಂದ 20ರಷ್ಟು ಬೆಲೆ ಜಾಸ್ತಿಯಾಗಿದೆ. ಮನೆಗಳಲ್ಲಿ ಪೂಜಿಸಲ್ಪಡುವ ಚಿಕ್ಕ ಮೂರ್ತಿಗಳಿಂದ, ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲ್ಪಡುವ ದೊಡ್ಡ ಗಾತ್ರದ ಗಣೇಶ ವಿಗ್ರಹಗಳನ್ನು ಭಾನುವಾರ ಜನತೆ ಕೊಂಡೊಯ್ಯುತ್ತಿದ್ದುದು ನಗರಗಳಲ್ಲಿ ಕಂಡುಬಂತು. ಚೌತಿಗಾಗಿ ನಗರದ ಬೀದಿ ಬೀದಿಗಳಲ್ಲಿ ಗಣೇಶ ವಿಗ್ರಹಗಳು ಮಾರಾಟವಾಗುತ್ತಿವೆ.
ಹಿಂದಿನ ವರ್ಷ 50 ರಿಂದ 80 ರೂಪಾಯಿಗೆ ಲಭ್ಯವಾಗುತ್ತಿದ್ದ ಮಣ್ಣಿನ ಚಿಕ್ಕ ಗಣೇಶ ಮೂರ್ತಿಗಳು ಈ ಬಾರಿ 100 ರಿಂದ 120 ರೂಪಾಯಿ ಆಗಿವೆ. ಸಾಧಾರಣ ಗಾತ್ರದ ಮೂರ್ತಿಗಳಿಗೆ 1 ಸಾವಿರದಿಂದ 5 ಸಾವಿರ ರೂಪಾಯಿ ಬೆಲೆಯಿದ್ದರೆ, ದೊಡ್ಡ ಗಾತ್ರದ ವಿಗ್ರಹಗಳಿಗೆ 40 ಸಾವಿರದಿಂದ 60 ಸಾವಿರ ರೂಪಾಯಿವರೆಗೂ ಬೆಲೆಯಿದೆ. ಹೀಗಾಗಿ ಮೂರ್ತಿ ಕೊಳ್ಳುವವರು ಚೌಕಾಸಿಯಲ್ಲಿ ತೊಡಗಿದ್ದು ಸಹಜವಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





