ಬೆಂಗಳೂರು;- ಬೆಂಗಳೂರಿನಲ್ಲಿ ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಆಭರಣ ದರ ಹೇಗಿದೆ ಎಂಬ ಬಗ್ಗೆ ತಿಳ್ಕೋಬೇಕಾ.. ಇಲ್ಲಿದೆ ವಿವರ..
ಇಂದು ದೇಶದಲ್ಲಿ ಬಂಗಾರದ ದರದಲ್ಲಿ ಇಳಿಕೆಯಾಗಿದೆ. ಇನ್ನು, ಬೆಳ್ಳಿ ದರದಲ್ಲಿ ದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ ಬೆಂಗಳೂರಲ್ಲಿ ಇಳಿಕೆಯಾಗಿದೆ. ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ ನೋಡಿ..
ಒಂದು ಗ್ರಾಂ ಚಿನ್ನ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 5,364
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 5,852
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 53,640 ಆಗಿದ್ದು ನಿನ್ನೆಗಿಂತ ಬೆಲೆ ಇಳಿಕೆಯಾಗಿದೆ. ಇನ್ನು, ದೇಶದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 53,890, ರೂ. 53,640 ಹಾಗೂ 53,640 ರೂ. ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಚಿನ್ನದ ಬೆಲೆ ಶನಿವಾರ 53,790 ರೂ. ಆಗಿದ್ದು, ಬೆಲೆಯಲ್ಲಿ ಇಳಿಕೆಯಾಗಿದೆ.
ಇನ್ನು, ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಬೆಳ್ಳಿ ದರದಲ್ಲಿ ಸಹ ಯಥಾಸ್ಥಿತಿ ಕಾಯ್ದುಕೊಂಡಿದೆ.. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ – ಇಳಿಕೆಯಾದಂತೆಯೂ ಚಿನ್ನ – ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
ದೇಶಾದ್ಯಂತ ಇಂದು ಬಂಗಾರದ ದರದಲ್ಲಿ ಕಡಿಮೆಯಾಗಿದ್ದರೆ, ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ, ಬೆಂಗಳೂರಲ್ಲಿ ಬೆಳ್ಳಿ ದರದಲ್ಲಿ ಹೆಚ್ಚಾಗಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 735, ರೂ. 7,350 ಹಾಗೂ ರೂ. 73,500 ಗಳಾಗಿವೆ. ಇನ್ನು, ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 77,500 ಆಗಿದ್ದು, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ರೂ. 74,700 ಹಾಗೂ ಕೋಲ್ಕತ್ತದಲ್ಲಿ 1 ಕೆಜಿ ಬೆಳ್ಳಿ ದರ ರೂ. 74,700 ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1 ಕೆಜಿ ಬೆಳ್ಳಿ ದರ 74,700 ರೂ. ಆಗಿದ್ದು, ದೇಶದಲ್ಲಿ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





