Breaking News

ಮುದ್ದಾದ ತಂಗಿಯನ್ನು ಚಿರಂಜೀವ ಸರ್ಜಾ ಮತ್ತು ಮೇಘನಾ ರಾಜ್​ ಮಗ ರಾಯನ್​ ಭೇಟಿ ಮಾಡಿದ್ದಾನೆ….

ಸ್ಯಾಂಡಲ್​ವುಡ್​ ನಟ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾಗೆ 2ನೇ ಮಗು ಜನಿಸಿರೋದು ಎಲ್ಲರಿಗೂ ಗೊತ್ತೇ ಇದೆ. ಆದರೆ ಮೊದಲ ಮಗು ಹೆಣ್ಣು ಮಗುವಾಗಿದ್ದು, ಇಂದಿಗೆ 1 ವರ್ಷ ತುಂಬಿದೆ. ಹಾಗಾಗಿ ಮುದ್ದಾದ ತಂಗಿಯನ್ನು ಚಿರಂಜೀವ ಸರ್ಜಾ ಮತ್ತು ಮೇಘನಾ ರಾಜ್​ ಮಗ ರಾಯನ್​ ಭೇಟಿ ಮಾಡಿದ್ದಾನೆ. ತಂಗಿ ಜೊತೆಗೆ ಆಟವಾಡಿದ್ದಾನೆ. ಇಬ್ಬರು ಮಾತನಾಡುವ ಮುದ್ದಾದ ದೃಶ್ಯವನ್ನು ನಟಿ ಮೇಘನಾ ರಾಜ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಮೇಘನಾ ರಾಜ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ರಾಯನ್​ ತನ್ನ ಚಿಕ್ಕಪ್ಪ ಧ್ರುವ ಸರ್ಜಾ ಮಗಳು ಕಣ್ಮಣಿ ಜೊತೆ ಮಾತನಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ರಾಯನ್​, ಕಣ್ಮಣಿಯನ್ನು ಕಂಡು ಸೋ ಕ್ಯೂಟ್​, ಐ ಲವ್​ ಯೂ ಎಂದು ಹೇಳುತ್ತಾನೆ. ಬಳಿಕ ತಂಗಿಯನ್ನು ನಮ್ಮ ಮನೆಗೆ ಕರೆದುಕೊಂಡು ಹೋಗುವ ಎಂದು ಹೇಳಿದ್ದಾನೆ. ಸದ್ಯ ಈ ದೃಶ್ಯ ವೈರಲ್​ ಆಗಿದೆ

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *