Breaking News

ಲಿಂಗಾಯತ ಸಮಾಜದ ಅನ್ಯಾಯ ಸರಿಪಡಿಸಬೇಕು….

ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.ಲಿಂಗಾಯತ ಅನ್ಯಾಯದ ಬಗ್ಗೆ ಶಾಮನೂರು ಅವರು ಮಾತನಾಡಿದ್ದು ಸತ್ಯಕ್ಕೆ ಹತ್ತಿರವಾಗಿದೆ.ಶಾಮನೂರು ಅವರು ನಮ್ಮೆಲ್ಲರ ಧ್ವನಿಯಾಗಿ ಮಾತನಾಡಿದ್ದಾರೆ.ನಾನು ನಮ್ಮ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನಿಸಿದ್ದೆನೇ,ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಅಂತ ಸುಮ್ಮನಿದ್ದೆ.ಕೇವಲ ಲಿಂಗಾಯತ ಸಮುದಾಯ ಮಾತ್ರವಲ್ಲ ಯಾವುದೇ ಸಮಾಜಕ್ಕೆ ಅನ್ಯಾಯವಾಗ ಬಾರದರು ಇದನ್ನು ಸಿಎಂ ಸರಿಪಡಿಸಬೇಕು ಎಂದು ಹೇಳಿದರು.

ಪಂಚಮಸಾಲಿ ಸಮಾಜಕ್ಕೆ ಆದಷ್ಟು ಬೇಗ 2A ಮೀಸಲಾತಿ ಕೊಡಬೇಕು,ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ, ಕಣ್ಣು ತೆರೆದಿಲ್ಲ,ಸೌಜನ್ಯಾಕ್ಕದರೂ ನಮ್ಮನ್ನು ಕರೆದು ಮಾತಾಡಿಲ್ಲ,ಪಂಚಮಸಾಲಿ ಸಮಾಜ ಈ ಬಾರಿ ಕಾಂಗ್ರೆಸ್ ಬೆನ್ನಿಗೆ ನಿಂತಿದೆ ಅನ್ನೋದನ್ನು ತಿಳ್ಕೋಬೇಕು,ಲಿಂಗಾಯತ ಪಂಚಮಸಾಲಿ ವಿಚಾರದಲ್ಲಿ ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದರು.
ದುಷ್ಟ ಮನಸ್ಸುಗಳು ನಮಗೆ ಮೀಸಲಾತಿ ಸಿಗದಂತೆ ತಡೆ ಹಿಡಿದಿವೆ.ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರ ಮೇಲೆ ವಿಶ್ವಾಸವಿದೆ.ಲೋಕಸಭಾ ಚುನಾವಣೆಯೊಳಗೆ ಮೀಸಲಾತಿ ಕೊಟ್ಟು ಸಮಾಜದ ಋಣ ತೀರಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.
ಸಮಾಜಕ್ಕೆ ಯಾರು ಕೊಡುತ್ತಾರೆ ಅವರನ್ನು ಗೆಲ್ಲಿಸುತ್ತೇವೆ. ಕೊಡದೆ ಇರುವವರ ವಿರುದ್ಧ ಅಸಮಾಧಾನ ಗೊಳ್ಳುವುದು ನಮ್ಮ ಸಮಾಜಕ್ಕೆ ಗೊತ್ತು ಎಂದು ಹುಬ್ಬಳ್ಳಿಯಲ್ಲಿ ಮಾತನಾಡಿದರು.

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *