Breaking News

ಧಾರವಾಡದ ಅನೇಕ ಪ್ರದೇಶಗಳಲ್ಲಿ ಎನ್.ಶಶಿಕುಮಾರ ಅವರು ಬೈಕ್ ಮೇಲೆ ಗಸ್ತು

ಧಾರವಾಡ: ಧಾರವಾಡದ ಅನೇಕ ಪ್ರದೇಶಗಳಲ್ಲಿ ಪೊಲೀಸ್‌ ಆಯುಕ್ತ ಎನ್.ಶಶಿಕುಮಾರ ಅವರು ಬೈಕ್ ಮೇಲೆ ಗಸ್ತು ತಿರುಗಿದ್ದಾರೆ.

ಸಾರ್ವಜನಿಕರು ಪೊಲೀಸರೊಂದಿಗೆ ಸ್ನೇಹದಿಂದಿರಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಸಾರ್ವಜನಿಕರು ಪೊಲೀಸರೊಂದಿಗೆ ಬಾಂಧವ್ಯದಿಂದ ಇರಬೇಕು ಎಂಬ ಉದ್ದೇಶದಿಂದ ಧಾರವಾಡದ ಅನೇಕ ಪ್ರದೇಶಗಳಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ಬೈಕ್‌ ಮೇಲೆ ಸಂಚರಿಸಿ ಗಮನಸೆಳೆದರು. ಅಲ್ಲದೇ ಸಾರ್ವಜನಿಕರ ಸಮಸ್ಯೆ ಏನು ಎಂಬುದರ ಕುರಿತು ಅನೇಕ ಕಡೆ ಸಾರ್ವಜನಿಕರ ಅಹವಾಲನ್ನೂ ಅವರು ಸ್ವೀಕರಿಸಿದರು.

ಪೊಲೀಸ್‌ ಆಯುಕ್ತರಿಗೆ ಡಿಸಿಪಿ ಮಹಾಲಿಂಗ ನಂದಗಾವಿ, ಎಸಿಪಿ ಪ್ರಶಾಂತ ಸಿದ್ಧನಗೌಡರ, ಇನ್‌ಸ್ಪೆಕ್ಟರ್‌ಗಳಾದ ಪ್ರಭು ಗಂಗೇನಹಳ್ಳಿ, ಸಂಗಮೇಶ ದಿಡಿಗನಾಳ, ಕಾಡದೇವರಮಠ ಸೇರಿದಂತೆ ಅನೇಕರು ಸಾಥ್ ನೀಡಿದರು.

Share News

About Shaikh BigTv

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *