ಹೆನ್ನಾಗರ: ಈ ಬಾರಿ ರಾಜ್ಯದಲ್ಲಿ ಮಳೆ ಕೈ ಕೊಟ್ಟ ಕಾರಣ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರದ ಪ್ರಾಧಿಕಾರ ಟ್ರಿಮಿನಲ್ ನಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ,ಕೆಲವು ಸಂಸತ್ ಸದಸ್ಯರು ಸಹ ಹೆಚ್ಚುವರಿ ನೀರಿನ ಅವಶ್ಯಕತೆ ಇದೆ ಎಂದು ಲೋಕಸಭೆಯಲ್ಲಿ ಪ್ರಸ್ತಾವನೆಯನ್ನು ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದರಾದಡಿಕೆ ಸುರೇಶ ತಿಳಿಸಿದರು.ಇಂದು ಬೆಂಗಳೂರು ಹೊರವಲಯ ಹೆನ್ನಾಗರ ಗ್ರಾಮಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ಸರಿಯಾಗಿ ಮಳೆ ಇಲ್ಲದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ ಅವರಿಗೆ ವ್ಯವಸಾಯಕ್ಕೆ ಹಾಗು ಧನ ಕರುಗಳಿಗೆ ಹೆಚ್ಚು ಕಾವೇರಿ ನೀರನ್ನು ಒದಗಿಸುವ ಬಗ್ಗೆ ಲೋಕಸಭೆಯಲ್ಲಿ ಚರ್ಚೆಗಳು ನಡೆಯುತ್ತಿದೆ ಎಂದರು. ಮುಂದುವರೆದು ಮಾತನಾಡಿ, ಕಾವೇರಿ ನೀರು ಮಂಡ್ಯ ಜನಕ್ಕೆ ಅಷ್ಟೇ ಅಲ್ಲ ಇಡೀ ಕರ್ನಾಟಕದ ರೈತರಿಗೆ ಬೇಕಾಗಿದೆ ಅದ್ರೆ ಮಂಡ್ಯ ಜನತೆ ನೀರಿಗಾಗಿ ಪ್ರತಿಭಟನೆಗೆ ಹಿಳಿದಿದ್ದಾರೆ, ಕೇಂದ್ರದ ಪ್ರಾಧಿಕಾರ ಟ್ರಿಮಿನಲ್ ನಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಕೆಲವು ಸಂಸತ್ ಸದಸ್ಯರು ಸಹ ಲೋಕಸಭೆಯಲ್ಲಿ ಪ್ರಸ್ತಾವನೆಯನ್ನು ಮಾಡಿದ್ದಾರೆ ಹೆಚ್ಚುವರಿಯಾಗಿ ನಮಗೆ ನೀರನ್ನು ಕೊಡಬೇಕು ಕುಡಿಯೋ ನೀರಿಗೆ ಧನ ಕರುಗಳಿಗೆ ಹಾಗೆ ಕೆಲವು ರೈತರು ಮಳೆಯನ್ನು ನಂಬಿಕೊಂಡು ಬೆಳೆಯನ್ನು ಇಟ್ಟಿದ್ದಾರೆ ಅದು ಹಾಳಾಗುತ್ತಿದೆ ಎಂದು ಒತ್ತಾಯ ಮಾಡುತ್ತಿದ್ದಾರೆ,ನಾನು ಕೂಡ ಕೇಂದ್ರದ ಮಂತ್ರಿಗಳನ್ನು ಒತ್ತಾಯ ಮಾಡಿ ಮಳೆ ಬಹಳ ಕೈ ಕೊಟ್ಟಿರೋದ್ರಿಂದ ನಮ್ಮ ಹಳೆ ಮೈಸೂರು ಭಾಗಕ್ಕೆ ಬಹಳಷ್ಟು ನೀರಿನ ಅವಶ್ಯಕತೆ ಇದೆ ಪ್ರಾಧಿಕಾರಕ್ಕೆ ಸೂಕ್ತವಾದ ನಿರ್ದೇಶನವನ್ನು ಕೊಡಬೇಕೆಂದು ಒತ್ತಾಯವನ್ನು ಮಾಡುತ್ತೇನೆಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





