Breaking News

ಸಿಲಿಕಾನ್ ಸಿಟಿಯಲ್ಲಿ ಸರ್ಕಾರಿ ಭೂಮಿಗಳು ಅಲ್ಲಲ್ಲಿ ಒತ್ತುವರಿ ಆಗಿದ್ದರ ವಿರುದ್ಧ ಸಮರ…

ಬೆಂಗಳೂರು: ಬೃಹದಾಕಾರವಾಗಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿಯಲ್ಲಿ ಸರ್ಕಾರಿ ಭೂಮಿಗಳು ಅಲ್ಲಲ್ಲಿ ಒತ್ತುವರಿ ಆಗಿದ್ದರ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ಸಮರ ಮುಂದುವರಿಸಿದೆ. ಇದೀಗ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅತಿಕ್ರಮಣವಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಪ್ರಾಧಿಕಾರ ಮರಳಿ ಪಡೆದಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ₹25 ಕೋಟಿ ಮೌಲ್ಯದ 05 ಎಕರೆ ಭೂಮಿ ಒತ್ತುವರಿ ಆಗಿತ್ತು. ಮಂಗಳವಾರ ಒತ್ತುವರಿ ವಿರುದ್ಧ ಕ್ರಮ ಕೈಗೊಂಡ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅತಿಕ್ರಮಣ ತೆರವುಗೊಳಿಸಿ ಭೂಮಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ, ಒತ್ತುವರಿ ಪ್ರದೇಶಗಳ ಪೈಕಿ ಮೂರು ಎಕರೆಯಲ್ಲಿ ಕಂದಾಯ ನಿವೇಶನಗಳು ಬಂದಿವೆ. ಈ ಸಂಬಂಧ ಪ್ರಾಧಿಕಾರ ಈ ಹಿಂದಿಯೇ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿತ್ತು. ಒತ್ತುವರಿ ತೆರವಿಗೆ ಸೂಚನೆ ನೀಡಿತ್ತು. ಹೀಗಿದ್ದರು ಸಹಿತಿ ನೋಟಿಸ್ ನಿರ್ಲಕ್ಷ್ಯ ಮಾಡಿದ್ದಲ್ಲದೇ ಅತಿಕ್ರಮ ಮುಂದುವರಿಸಿದ್ದರು ಎನ್ನಲಾಗಿದೆ.

Share News

About BigTv News

Check Also

ಯೋಗೇಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು ಮಂಜೂರು!

ಬೆಂಗಳೂರು : ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಇದೀಗ ಕಾಂಗ್ರೆಸ್ ಶಾಸಕ ವಿನಯ್ ಕುಲಕರಣಿಗೆ ಬಿಗ್ …

Leave a Reply

Your email address will not be published. Required fields are marked *