ಒಟ್ಟಾವ್: ಭಾರತ ಹಾಗೂ ಕೆನಡಾ ನಡುವಿನ ಸಂಘರ್ಷ ಮುಂದುವರಿದಿದೆ. ಭಾರತದಿಂದ 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವ ನಿರ್ಧಾರವನ್ನು ಕೆನಡಾ ತೆಗೆದುಕೊಂಡಿದೆ. ಅದೇ ರೀತಿ ಚಂಡೀಗಢ, ಮುಂಬೈ ಮತ್ತು ಬೆಂಗಳೂರಿನಲ್ಲಿ ವೀಸಾ ಮತ್ತು ಕಾನ್ಸುಲರ್ ( ದೂತಾವಾಸ ) ಸೇವೆಗಳ ಕಾರ್ಯಾಚರಣೆಗಳಿಗೆ ತಡೆ ನೀಡಿದೆ. ಕೆನಡಾ ಸರ್ಕಾರದ ಈ ನಿರ್ಧಾರವು ವಲಸೆ ಮತ್ತು ವೀಸಾ ಅರ್ಜಿ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಬಹುದು ಎಂದು ಸಚಿವ ಮಾರ್ಕ್ ಮಿಲ್ಲರ್ ಹೇಳಿದ್ದಾರೆ. ಇದರ ಪರಿಣಾಮವಾಗಿ ಕೆನಡಾದ 21 ರಾಜತಾಂತ್ರಿಕರು ಮಾತ್ರ ಭಾರತದಲ್ಲಿ ಉಳಿಯಲಿದ್ದಾರೆ. ವಾಪಸ್ಸು ಕರೆಸಿಕೊಂಡಿರುವ ರಾಜತಾಂತ್ರಿಕರಲ್ಲಿ 27 ವಲಸೆ ಇಲಾಖೆಯ ಸಿಬ್ಬಂದಿಗಳು ಸೇರಿದ್ದಾರೆ’ ಎಂದು ಜೋಲಿ ಹೇಳಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





