ಅಕ್ಟೋಬರ್ 19ರಂದು ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್ ಗಳಲ್ಲಿ 256 ರನ್ ಗಳಿಸಿದರೆ, ಭಾರತ ತಂಡ ಕೇವಲ 41.3 ಓವರ್‌ಗಳಲ್ಲಿ 257 ರನ್‌ಗಳನ್ನು ಬೆನ್ನಟ್ಟಿತು.
ಪುಣೆಯ ಅಂಗಳದಲ್ಲಿ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಏಕದಿನ ಮಾದರಿಯಲ್ಲಿ 48ನೇ ಶತಕ ಸಿಡಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು. ಏಕದಿನ ವಿಶ್ವಕಪ್‌ನಲ್ಲಿ ಈ ವರೆಗೂ ನಾಲ್ಕು ಪಂದ್ಯಗಳನ್ನು ಆಡಿರುವ ಭಾರತ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.ಭಾರತ ತಂಡ ಗೆಲುವನ್ನು ಭಾರತದ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ಒಬ್ಬ ನಟಿ ಮಾತ್ರ ಭಾರತದ ಗೆಲುವಿನಿಂದ ಸಂತೋಷ ಕಳೆದುಕೊಂಡಿದ್ದಾರೆ. ಹೌದು, ಪಾಕಿಸ್ತಾನ ನಟಿ ಸೆಹರ್ ಶಿನ್ವಾರಿ ಭಾರತದ ಗೆಲುವು ಕಂಡು ಬೇಸರಗೊಂಡಿದ್ದಾರೆ!
ಸೆಹರ್ ಶಿನ್ವಾರಿ ಅವರ ಆಸೆ ಈಡೇರಲಿಲ್ಲ ಭಾರತ ಈ ಪಂದ್ಯದಲ್ಲಿ ಸುಲಭವಾಗಿ ಗೆಲುವು ಸಾಧಿಸಿತು. ಪಂದ್ಯದ ನಂತರ ಪಾಕ್ ನಟಿ ಬಾಂಗ್ಲಾದೇಶಕ್ಕೆ ಹೊಸ ಸಂದೇಶ ಕಳುಹಿಸಿದ್ದಾರೆ. ಸೋತರೂ ಬಾಂಗ್ಲಾದೇಶ ಆಟಗಾರರನ್ನು ಹೊಗಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





