Breaking News

ರೇಷ್ಮೆನಗರಿಯ ಜಾನಪದಲೋಕದಲ್ಲಿ ಜನಪದ ಸೊಗಡಿನ ಸಾಂಪ್ರದಾಯಿಕ ಬೊಂಬೆ ಪ್ರದರ್ಶನ ಕಳೆಕಟ್ಟಿದೆ…

ರಾಮನಗರ: ನಾಡಹಬ್ಬ ದಸರಾಗೆ ರೇಷ್ಮೆನಗರಿಯ ಜಾನಪದಲೋಕದಲ್ಲಿ ಜನಪದ ಸೊಗಡಿನ ಸಾಂಪ್ರದಾಯಿಕ ಬೊಂಬೆ ಪ್ರದರ್ಶನ ಕಳೆಕಟ್ಟಿದೆ. ಬೊಂಬೆ ಪ್ರದರ್ಶನ ಅಕ್ಟೋಬರ್ 15 ನವೆಂಬರ್ 15 ರವರೆಗೆ ಪ್ರಾವಾಸಿಗರ ತನುಮನ ತಣಿಸುತ್ತಿದೆ. 1996 ರಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮೊದಲ ಬಾರಿಗೆ ಬೊಂಬೆಗಳ ಪ್ರದರ್ಶನವನ್ನು ಪ್ರಾರಂಭಿಸಿತು.

ಪ್ರತಿ ವರ್ಷದಂತೆ ಈ ವರ್ಷವೂ ಗೊಂಬೆ ಪ್ರದರ್ಶನವನ್ನು ನವರಾತ್ರಿಯ ಮೊದಲ ದಿನ ಪ್ರಾರಂಭಿಸಲಾಗಿದೆ. ಈ ವರ್ಷದ ಬೊಂಬೆಗಳ ಪ್ರದರ್ಶನದಲ್ಲಿ ವಿಶೇಷವಾಗಿ ಭಾರತದ ಸಂವಿಧಾನ ರಚನೆಯಾಗಿ 75 ವರ್ಷ ಪೂರೈಸುತ್ತಿರುವ ಸುಸಂದರ್ಭದಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂಬ ಶೀರ್ಷಿಕೆಯಡಿ ಸಂವಿಧಾನದ ಆಶಯದಂತೆ ಬುದ್ಧ, ಬಸವ, ಜೀಸಸ್, ಇಸ್ಲಾಂ ಗಾಂಧಿ, ಅಂಬೇಡ್ಕರ್, ಧರ್ಮದ ಕುರಿತ ಬೊಂಬೆಗಳ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ.

ದಸರಾ ಬೊಂಬೆ ಪ್ರದರ್ಶನವನ್ನು ರಾಜ್ಯ ಪರಿಸರ ಪರಿಚಾಲಕರಾದ ಮುಕುಂದರಾವ್ ಲೋಕಂಡೆ, ಡಾ.ಎಸ್.ಕೆ.ಖರಿಂಖಾನ್ ಮೊಮ್ಮಗ ತನ್ವೀರ್ ಅಹಮದ್, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಹಿ.ಶಿ ರಾಮಚಂದ್ರೇಗೌಡ, ಕಾರ್ಯಾಧ್ಯಕ್ಷರಾದ ಪ್ರೊ.ಹಿ.ಚಿ ಬೋರಲಿಂಗಯ್ಯ ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ಜಾನಪದ ಲೋಕದ ಸಿಬ್ಬಂದಿ ಉಪಸ್ಥಿತರಿದರು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *