ಕನ್ನಡದ ಹಿರಿಯ ನಟಿ ತಾರಾ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ದಸರಾ ಹಬ್ಬದ ಪ್ರಯುಕ್ತವಾಗಿ ತಾರಾ (Tara) ಅವರನ್ನು ಮನೆಯೊಳಗೆ ಕಳುಹಿಸಲಾಗಿದೆ. ಹಬ್ಬವನ್ನು ಮನೆಮಂದಿ ಸಂಭ್ರಮದಿಂದ ಆಚರಿಸುತ್ತಿರುವ ಪ್ರೊಮೋವನ್ನು ವಾಹಿನಿಯು ಬಿಡುಗಡೆ ಮಾಡಿದೆ. ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ ಹಬ್ಬವನ್ನು ಆಚರಿಸಿರುವ ತಾರಾ, ಭರ್ಜರಿ ಮನೆರಂಜನೆಯನ್ನು ಮನೆಯೊಳಗೆ ಇದ್ದವರ ಜೊತೆ ಪಡೆದಿದ್ದಾರೆ.
ಒಂದು ಕಡೆ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದರೆ, ಮತ್ತೊಂದು ಕಡೆ ಸೂತಕದ ಛಾಯೆಯೂ ಆವರಿಸಿಕೊಂಡಿದೆ. ಅದನ್ನು ಮರೆಸುವುದಕ್ಕಾಗಿಯೇ ಬಿಗ್ ಬಾಸ್ ಹೊಸ ಎಂಟ್ರಿಯೊಂದನ್ನು ಕೊಡಿಸಿದೆ. ಹಾಗಂತ ತಾರಾ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿಲ್ಲ. ಅತಿಥಿಯಾಗಿ ಎಂಟ್ರಿ ಕೊಟ್ಟು, ಹಬ್ಬ ಮುಗಿಸಿಕೊಂಡು ವಾಪಸ್ಸಾಗಲಿದ್ದಾರೆ. ಸೂತಕದ ಛಾಯೆಯಾಗಿ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಸ್ಪರ್ಧಿಯೊಬ್ಬರನ್ನು ಮನೆಯಿಂದಲೇ ಬಂಧಿಸಲಾಗಿದೆ.
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಜೈಲು ಪಾಲಾಗಿದ್ದಾರೆ. ಹುಲಿ ಉಗುರು ಧರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೊನ್ನೆ ರಾತ್ರಿ ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು(Arrest). ಅರಣ್ಯ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಸಂತೋಷ್ ಅವರನ್ನು ಹಾಜರು ಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಧೀಶರು ನ್ಯಾಯಾಂಗ ಬಂಧನ (Jail) ವಿಧಿಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





