Breaking News

ತಂದೆಗೆ ದಂಡ ವಿಧಿಸದಂತೆ ಮಕ್ಕಳು ಪೊಲೀಸರ ಜೊತೆ ಮನವಿ…

ತಂದೆಗೆ ದಂಡ ವಿಧಿಸದಂತೆ ಮಕ್ಕಳು ಪೊಲೀಸರ ಜೊತೆ ಮನವಿ ಮಾಡಿಕೊಂಡಿದ್ದು, ಸಂಚಾರಿ ನಿಯಮವನ್ನು ಸರಿಯಾಗಿ ಪಾಲಿಸುವಂತೆ ಬೈಕ್​ ಸವಾರನಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ವ್ಯಕ್ತಿಯೊಬ್ಬ ಆರು ಮಕ್ಕಳನ್ನು ಬೈಕ್​ನಲ್ಲಿ ಕೂರಿಸಿಕೊಂಡು ಟ್ರಾಫಿಕ್​ ನಿಯಮಗಳನ್ನು ಉಲ್ಲಂಘಿಸಿ ಹೋಗುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಚಿತ್ರದಲ್ಲಿ ಬೈಕ್​ ಸವಾರನ ಹಿಂದೆ ನಾಲ್ವರು ಮಕ್ಕಳು ಹಾಗೂ ಮುಂದೆ ಇಬ್ಬರು ಮಕ್ಕಳು ಕುಳಿತಿರುವುದು ಕಂಡು ಬಂದಿದೆ.

ಇದು ವಾರಾಣಸಿಯ ಚಿತ್ರವಾಗಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಕೊತ್ವಾಲಿ ಪೊಲೀಸ್​ ಠಾಣೆಯ ಪ್ರಭಾರಿ ಆಶಿಶ್​ ಮಿಶ್ರಾ, ಮಂಗಳವಾರ ಸಂಜೆ ಕೊತ್ವಾಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಹೋಗುತ್ತಿದ್ದ ಬೈಕ್​ನಲ್ಲಿ ಹೋಗುತ್ತಿದ್ದ ಸವಾರನನ್ನು ತಡೆದು, ಛೀಮಾರಿ ಹಾಕಲಾಗಿದೆ. ಒಂದೇ ಬೈಕ್​ನಲ್ಲಿ 6 ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆತ, ತನ್ನ ಮಕ್ಕಳ ಜೊತೆಗೆ ಇತರ ಮಕ್ಕಳ ಪ್ರಾಣಕ್ಕೂ ಅಪಾಯ ತಂದೊಡ್ಡಿದ್ದ.

Share News

About BigTv News

Check Also

ಒಳ್ಳೆಯ ಸಮಾಜಕ್ಕೆ ಒಳ್ಳೆಯ ಕರ್ತವ್ಯ ನಿರ್ವಹಿಸುವ ಪೊಲೀಸರು ಬೇಕು…

ಬೆಂಗಳೂರು: ವರ್ಗಾವಣೆಗಳಿಗೆ ಪೊಲೀಸ್ ಅಧಿಕಾರಿಗಳು ಹಾತೊರೆಯುವುದು, ಜಾತಿ ಬಳಸುವುದು ಅತ್ಯಂತ ಕೆಟ್ಟದ್ದು. ಹಾಗೆ ಮಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿ …

Leave a Reply

Your email address will not be published. Required fields are marked *