Breaking News

ಮುಂಗಾರು ಮಳೆ ಕೊರತೆಯಿಂದ ಚೆಂಡು ಹೂವಿನ ಬೆಳೆ ಕೈಹಿಡಿದಿದೆ….

ರಾಯಚೂರು: ಮಾನ್ವಿ ಪಟ್ಟಣದ ಖಾಸಗಿ ಕಾಲೇಜಿನ ಇಂಗ್ಲಿಷ್‌ ವಿಷಯದ ಉಪನ್ಯಾಸಕ ನಾಗರಾಜ ಚಿಮ್ಲಾಪೂರ ವೃತ್ತಿಯ ಜೊತೆಗೆ ಚೆಂಡು ಹೂವು ಕೃಷಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಪಟ್ಟಣದ ಹೊರವಲಯದ ಸೀಕಲ್ ಕ್ರಾಸ್ ಬಳಿ‌ ಮೂರು ಹೆಕ್ಟೇರ್‌ ಜಮೀನು ಗುತ್ತಿಗೆ ಪಡೆದು ಮೂರು ವರ್ಷಗಳಿಂದ ಚೆಂಡು ಹೂವು ಬೆಳೆಯುತ್ತಿದ್ದಾರೆ. ನಾಗರಾಜ ಅವರು ತಾವು ಬೆಳೆದ ಚೆಂಡು ಹೂವುಗಳನ್ನು ಖುದ್ದಾಗಿ ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ. ಈ ವರ್ಷ ಮುಂಗಾರು ಮಳೆ ಕೊರತೆಯಿಂದ ಜೋಳ, ತೊಗರಿ, ಹತ್ತಿ ಬೆಳೆಗಳು ನಿರೀಕ್ಷಿತವಾಗಿ ಬೆಳೆಯದೆ ನಷ್ಟ ಅನುಭವಿಸಿದ್ದ ನಾಗರಾಜ ಅವರಿಗೆ ಚೆಂಡು ಹೂವಿನ ಬೆಳೆ ಕೈಹಿಡಿದಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೂರು ಎಕರೆ ಜಮೀನಿನಲ್ಲಿ ಬೆಂಗಳೂರಿನಿಂದ ತಂದ ಈಸ್ಟ್ ವೆಸ್ಟ್ ತಳಿಯ 10 ಸಾವಿರ ಸಸಿಗಳನ್ನು ನಾಟಿ ಮಾಡಿದ್ದಾರೆ. ಜಮೀನಿನ ಸಿದ್ಧತೆ, ಜಿಗಿ ಕೀಟದ ಬಾಧೆಯನ್ನು ತಡೆಯಲು ಹಾಗೂ ವಿಶೇಷವಾಗಿ ಚೆಂಡು ಹೂಗಳ ಬಣ್ಣ ಬದಲಾಗದಂತೆ ತಡೆಯಲು ತಮಿಳುನಾಡಿನಿಂದ ಕೀಟನಾಶಕಗಳನ್ನು ತಂದು ಸಿಂಪಡಣೆ ಮಾಡುತ್ತಿದ್ದಾರೆ.

Share News

About BigTv News

Check Also

ಸಚಿವ ಸಂತೋಷ್ ಲಾಡ್ ಅವರಿಗೆ ಅದ್ದೂರಿ ಗೌರವ ಸನ್ಮಾನ; ಆತ್ಮೀಯ ಭೇಟಿಯಲ್ಲಿ…

ಸಚಿವ ಸಂತೋಷ್ ಲಾಡ್ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಗೌರವ ಸನ್ಮಾನ… ಕಾಂಗ್ರೆಸ್ ಮುಖಂಡರಾದ ಫತೇಶಾ ಯಾರಗಟ್ಟಿ ಹಾಗೂ ದಾದಾಪೀರ್ ಬಳ್ಳಾರಿ ಅಬ್ಬಾಸ್ …

Leave a Reply

Your email address will not be published. Required fields are marked *