ಸಿಮೆಂಟ್ ಲಾರಿ ಹಾಗೂ ಟಾಟಾ ಸುಮೋ ನಡುವೆ ಸಂಭವಿಸಿದ ಅಪಘಾತದಲ್ಲಿ 13 ಜನರು ಸಾವನ್ನಪ್ಪಿ ಹಲವರಿಗೆ ಗಾಯಗಳಾದ ಘಟನೆಯು ಚಿಕ್ಕಬಳ್ಳಾಪುರ ಪಟ್ಟಣದ ಹೊರವಲಯದಲ್ಲಿರುವ ಚಿತ್ರಾವತಿ ಎಂಬಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ. ಇಂದು ಬೆಳಗಿನ ಜಾವ ಚಿತ್ರಾವತಿಯಲ್ಲಿ ರಸ್ತೆ ಪಕ್ಕದಲ್ಲಿ ಸಿಮೆಂಟ್ ಲಾರಿಯೊಂದು ನಿಂತಿತ್ತು. ಅದೇ ಮಾರ್ಗವಾಗಿ ಬಂದ ಟಾಟಾ ಸುಮೋ ಎಸ್‍ಯುವಿಯು ವೇಗವಾಗಿ ಬಂದು ಸಿಮೆಂಟ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಸುಮೋದಲ್ಲಿದ್ದ ಪ್ರಯಾಣಿಕರಲ್ಲಿ ಹಲವಾರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ 8 ಗಂಡಸರು, 4 ಹೆಂಗಸರು, 1 ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಮೃತರ ಹೆಸರು ತಿಳಿದು ಬಂದಿಲ್ಲ.
ಮೃತಪಟ್ಟವರು ಆರು ಮಂದಿಯ ಗುರುತು ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ಅವರನ್ನು ದೊಡ್ಡಬಳ್ಳಾಪುರದ ಅರುಣಾ, ಅವರ ಪುತ್ರ ಋತ್ವಿಕ್, ಆಂಧ್ರಪ್ರದೇಶದ ಕೊತ್ತಚೆರುವಿನ ಪೆರುಮಾಳ್ ಪವನ್ ಕುಮಾರ್, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸುಬ್ಬಮ್ಮ, ಬಾಗೇಪಲ್ಲಿ ತಾಲೂಕಿನ ಮಾರ್ಗಾನುಕುಂಟೆಯ ನರಸಿಂಹಮೂರ್ತಿ, ಟಾಟಾ ಸುಮೋ ಚಾಲಕನಾದ ಆಂಧ್ರಪ್ರದೇಶದ ನರಸಿಂಹಪ್ಪ ಮೃತರು.
bigtvnews | Hubli Dharwad News | Kannada News | Karnataka News Hubli News | News In Hubli | Local news





