Breaking News

ಮಾಡುವುದಾದರೆ ಎಲ್ಲರ ಬಗ್ಗೆಯೂ ವಿಚಾರಣೆ ಆಗಬೇಕು ಎಂದು ಶಾಸಕ ಮಹೇಶ್‌ ಟೆಂಗಿನಕಾಯಿ..

ಹುಬ್ಬಳ್ಳಿ: ರಾಜಕಾರಣಿಗಳು ಸೇರಿದಂತೆ ಅನೇಕರು ಹುಲಿ ಉಗುರು ಧರಿಸುವ ಕುರಿತು ತಾರತಮ್ಯ ಕ್ರಮ ಬೇಡ. ಎಷ್ಟು ಮಂದಿ ರಾಜಕಾರಣಿಗಳ ಕೊರಳಲ್ಲಿ ಹುಲಿ ಉಗುರಿಲ್ಲ? ಮಾಡುವುದಾದರೆ ಎಲ್ಲರ ಬಗ್ಗೆಯೂ ವಿಚಾರಣೆ ಆಗಬೇಕು ಎಂದು ಶಾಸಕ ಮಹೇಶ್‌ ಟೆಂಗಿನಕಾಯಿ ಆಗ್ರಹಿಸಿದರು.

ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಜನರ ಕೊರಳಲ್ಲಿ ಹುಲಿ ಉಗುರು ಇದೆ. ಎಷ್ಟು ಮಂದಿ ರಾಜಕಾರಣಿಗಳ ಕೊರಳಲ್ಲಿ ಹುಲಿ ಉಗುರಿಲ್ಲ? ಯಾವತ್ತಾದರೂ ನೋಡಿದ್ದೀರಾ..? ಮಾಡುವುದಾದರೆ ಎಲ್ಲರ ಬಗ್ಗೆಯೂ ವಿಚಾರಣೆ ಆಗಬೇಕು. ಯಾರಿಗೂ ಕೂಡ ಅನ್ಯಾಯ ಆಗಬಾರದು. ಎಲ್ಲರಿಗೂ ನ್ಯಾಯ ಸಿಗುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.ಈ ಪ್ರಕರಣದ ಬಗ್ಗೆ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಕಾದು ನೋಡಬೇಕು. ಇದು ಇವತ್ತಿಂದಲ್ಲ, ಅದು ಒರಿಜಿನಲ್ಲಾ, ಡುಬ್ಲಿಕೇಟ್ ಎಂದು ಅವರೇ ಹೇಳುವುದಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕು. ಯಾರೋ ಒಬ್ಬರು ಹಿಡಿದು ಇನ್ನೊಬ್ಬರನ್ನು ಬಿಟ್ಟರು ಎನ್ನುವ ಹಾಗೆ ಆಗಬಾರದು ಎಂದರು.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *