ಧಾರವಾಡ ನಾಡ ಹಬ್ಬದಯಾದ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷ ಕೂಡ ಧಾರವಾಡದ ಶ್ರೀನಗರ ವೃತ್ತದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷ, ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು,ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ
ಉತ್ತರ ಕರ್ನಾಟಕದ ಖ್ಯಾತ ಹಾಸ್ಯ ಕಲಾವಿದ ಮಾಹದೇವ ಸತ್ತಿಗೇರಿ ,ಟೈಕ್ವಾಂಡೊ ಕರಾಟೆ ಬೆಳ್ಳಿಯ ಪದಕಪಡೆದ, ದಾಮಿನಿ ಬನ್ನಿಕೊಪ್ಪ,ಟೈಕ್ವಾಂಡೊ ಕರಾಟೆ ಕಂಚಿನ ಪದಕಗಳಸಿದ ಭೂಮಿಕಾ ಬನ್ನಿಕೊಪ್ಪ , ಶಿಕ್ಷಕರಾದ ಬಸವರಾಜ ಹುಬ್ಬಳ್ಳಿ , ಮಾಜಿ ಸೈನಿಕರಾದ
ಉಳ್ಳವಪ್ಪ ಶಿಗಿಹಳ್ಳಿ ಸಿಂಕದ್ರ ಶೇಖು ಯವರಿಗೆ ವೇದಿಕೆಯಿಂದ ಸನ್ಮಾನಿಸಲಾಯಿತು,
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾಧವ, ಮಲ್ಲಿಕಾರ್ಜುನ ಅಸುಂಡಿ, ಮಂಜುನಾಥ ಅಂಗಡಿ, ಸುಭಾಷ ಪಾಳೇಕರ,ಅನ್ವರ ನದಾಫ, ಜ್ಯೋತಿಬಾ ಪಾಟೀಲ, ಅರ್ಷದ ಪಠಾಣ, ಅರುಣ ಜಾಧವ, ದಯಾನಂದ ಜಾಧವ, ಮಲ್ಲಿಕಾರ್ಜುನ ಬಂಡೆ ಉಮೇಶ ಶಿಂಧೆ, ಮೆಹಬೂಬ್ ಮೆಹಬೂಬ ಪಠಾಣ, ಯೋಗೇಶ ಪೂಳ, ವಿಠಲ ಚಿಮ್ಮಲಗಿ, ರಾಘವೇಂದ್ರ ಸುಣಗದ, ಸಂತೋಷ ಇಂಗಳೆ ಸಂಜಯ ಹೊಸಮನಿ, ವಿನಯ ಬೆಳ್ಳಕ್ಕಿ, ಜೈಲಾನಿ ಜೀಗರ, ವಿವೇಕಾನಂದ ಕಡೇಮನಿ,ಅಶೋಕ ಶೆಟ್ಟಿ, ಸುಭಾಷ ಅಮ್ಮನಭಾವಿ, ಮಂಜುನಾಥ ಪೂಜಾರ ಮಹ್ಮದ ನೀಲಿ, ರಾಜು ಆಲೂರು, ವೆಂಕಟೇಶ ಮೂರ್ತಿ, ಪ್ರಮೋದ ಶೆಟ್ಟಿ, ರವಿ ಮೇಟಿ, ಅರುಣ ತೆಲಗಾರ, ಕರೀಮಖಾನ ಮುಲ್ಲಾ, ಪ್ರಶಾಂತ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





