ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿ ಮೊದಲ ತಿಂಗಳಿಂದಲ್ಲೆ ಗದ್ದಲ ಆರಂಭವಾಗಿದೆ. ಇದು ಹನಿಮೂನ ಸಮಯ ಆದ್ರೆ ಒಂದೇ ತಿಂಗಳಲ್ಲಿ ಅಸಮಾಧಾನ ಶುರುವಾಗಿದೆ..
ನಮ್ಮ ಪ್ರಕಾರ ಸಿದ್ದರಾಮಯ್ಯ ಎರಡುವರೆ ವರ್ಷ,ಡಿಕೆ ಶಿವಕುಮಾರ್ ಎರಡುವರೆ ವರ್ಷ ಅನ್ನೋ ಮಾಹಿತಿ ಇತ್ತು. ಆದರೆ ಸಿದ್ದರಾಮಯ್ಯ ಇವಾಗಲೇ ನಾಲ್ಕು ಜನರನ್ನು ರೆಡಿ ಮಾಡಿದ್ದಾರೆ.ಎರಡು ವರ್ಷ ಆದ ಬಳಿಕ ನಾಲ್ಕು ಜನರ ನಡುವೆ ಜಗಳ ಹಚ್ಚಿ ಅವರೇ ಮುಂದುವರಿಬೇಕು ಅಂದುಕೊಂಡಿದ್ದಾರೆ
ಆದರೆ ಅದು ಆಗಲ್ಲ ಎಂದ ಹುಬ್ಬಳ್ಳಿಯಲ್ಲಿ ಅರವಿಂದ ಬೆಲ್ಲದ್ ಹೇಳಿದರು. ಪಕ್ಷಕ್ಕೆ ಬಹಳ ಜನ ಕೆಲಸ ಮಾಡಿರ್ತಾರೆ ಎಂದ ಬೆಲ್ಲದ ಹೇಳಿದರು.
ಪರೋಕ್ಷವಾಗಿ ಡಿಕೆಗೆ ಬೆಂಬಲ ಸೂಚಿಸಿದ ಬೆಲ್ಲದ. ನಾವು ಅವರ ಬಗ್ಗೆ ಮಾತಾಡೋ ಅವಶ್ಯಕತೆ ಇಲ್ಲ.ಯಾಕಂದ್ರೆ ಅದು ತನ್ನಿಂದ ತಾನೇ ಆಗತ್ತೆ.
ನಾವು ವಿರೋಧ ಪಕ್ಷದಲ್ಲಿದ್ದೇವೆ
ಯತ್ನಾಳ ಟ್ವೀಟ್ ವಿಚಾರ
ಸರ್ಕಾರದಲ್ಲಿ ಜಗಳ ಆರಂಭವಾಗಿದೆ,ಸಂಶಯ ಬರೋ ತರಹ ನಡೆದುಕೊಳ್ತೀದಾರೆ ಎಂದರು.
ಕುಮಾರಸ್ವಾಮಿ ವಿಪಕ್ಷ ನಾಯಕರಾಗ್ತಾರಾ ಅನ್ನೋ ಪ್ರಶ್ನೆಗೆ ಅವರು ನಮ್ಮ ಪಕ್ಷದಲ್ಲಿಇಲ್ಲ, ಇನ್ನು ಸೀಟ್ ಶೇರಿಂಗ್ ಆಗಿಲ್ಲ.ಜಸ್ಟ್ ಪಾರ್ಟ್ ಆಪ್ NDA ಅವರು ಎಂದರು. ನಮ್ಮ ಪಕ್ಷದ ಹೆಚ್ಚು ಸ್ಥಾನ ಇವೆ.
ನಮ್ಮನ್ನೆ ವಿಪಕ್ಷ ನಾಯಕನ್ನ ಮಾಡ್ತಾರೆ ಎಂದ ಬೆಲ್ಲದ್ ಹೇಳಿದರು.ನಾವು ಸರ್ಕಾರ ತಗೆಯೋ ಬಗ್ಗೆ ತಲೆಕೆಡಸಿಕೊಂಡಿಲ್ಲ.
ಕಾಂಗ್ರೆಸ್ ನವರೇ ಹೊಡದಾಡತೀದಾರೆ ಎಂದ ಬೆಲ್ಲದ್, ಸರ್ಕಾರ ಏನ ಕೆಲಸ ಮಾಡಬೇಕು ಅದನ್ನು ಮಾಡಿಲ್ಲ.
ಹುಲಿ ಉಗುರು ಎಂದು ಗದ್ದಲ ಎಬ್ಬಸಿದೆ ಎಂದ ಬೆಲ್ಲದ್ ಮಾತನಾಡಿದರು.
ಅಧಿಕಾರಕ್ಕಾಗಿ ಕಾಂಗ್ರೆಸ್ ನವರು ಹೊಡೆದಾಡತೀದಾರೆ.
ಅವರ ಪಕ್ಷದಲ್ಲಿ ಏನಾದರೂ ಆದ್ರೆ ಅದು ಅವರ ಹಣೆಬರಹ ಎಂದ ಬೆಲ್ಲದ್ ಹೇಳಿದರು.
ಪರೀಕ್ಷಾ ಅಕ್ರಮ ವಿಚಾರ.
ಇದಕ್ಕೆ ಕಾಂಗ್ರೆಸ್ ಉತ್ತರ ಕೊಡಬೇಕು. ಬ್ಲೂಟೂಥ್ ಉಪಯೋಗ ಮಾಡ್ರಾರೆ ಅನ್ನೋದೆ ಗೊತ್ತಿರಲಿಲ್ಲ.
ನಮ್ಮ ಸರ್ಕಾರ ಅಂತಹದ್ದನ್ನು ಹೊರಗೆ ತಂದಿತು. ಅವರ ಧೈರ್ಯ ನೋಡಿ ಜೈಲಿನಿಂದ ಹೊರಗೆ ಬಂದು ಅದನ್ನೆ ಮಾಡ್ತಾರೆ. ಇದು ಕೇವಲ ಪಾಟೀಲ್ ಇಬ್ಬರೇ ಅಲ್ಲಟೀಮ್ ಇರತ್ತೆ. ಅಧಿಕಾರಿಗಳು ಇರ್ತಾರೆ,ಹೊರಗಿನವರು ಇರ್ತಾರೆ ಎಂದರು. ಅಂತವರನ್ನು ಒಳಗೆ ಹಾಕಬೇಕು ಎಂದ ಬೆಲ್ಲದ್, ರಾಜಕೀಯ ನಾಯಕರು ಅಂತವರನ್ನು ದೂರ ಇಡಬೇಕು ಎಂದ ಬೆಲ್ಲದ್ ಹುಬ್ಬಳಿಯಲ್ಲಿ ಹೇಳಿದರು.
ಬಿಜೆಪಿ ನಾಯಕರಿಗ ಹೈಕಮಾಂಡ್ ಬುಲಾವ್.
ಇದು ಸಹಜ ಎಂದ ಬೆಲ್ಲದ್ ಮಾತನಾಡಿದರು.ಅವರೆಲ್ಲ ಹಿರಿಯ ನಾಯಕರ ಏನೋ ಮಾಹಿತಿಗಾಗಿ ಅವರನ್ನು ಕರೆದಿರಬೇಕು ಎಂದ ಬೆಲ್ಲದ್ ಹೇಳಿದರು. ಅವರೊಂದಿಗೆ ಚರ್ಚೆಗೆ ಕರೆದಿರಬೇಕು.
ಇದು ರೆಗ್ಯೂಲರ್ ಪ್ರೋಸೆಸ್ ಎಂದ ಬೆಲ್ಲದ್ ಹುಬ್ಬಳ್ಳಿಯಲ್ಲಿ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





