ವಿಜಯನಗರ: 5 ವರ್ಷ ನಾನೇ ಸಿಎಂ ಆಗಿ ಮುಂದುವರಿಯುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ಕುರಿತಂತೆ ಹೊಸಪೇಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ಐದು ವರ್ಷ ನಮ್ದೇ ಸರ್ಕಾರ ಇರುತ್ತೆ. ಐದು ವರ್ಷ ನಾನೇ ಮುಂದುವರಿಯುವೆ ಎಂದಿದ್ದಾರೆ.
ಡಿಸಿಎಂ ವಿಚಾರ ತಿರ್ಮಾನ ಮಾಡೋದು ಹೈಕಮಾಂಡ್, ನಮ್ಮದು ನ್ಯಾಷನಲ್ ಪಾರ್ಟಿ, ಏನೇ ತೀರ್ಮಾನ ಆದ್ರು ಹೈಕಮಾಂಡ್ ಜೊತೆ ಚರ್ಚೆ ಮಾಡಿಯೇ ಆಗುವುದು ಎಂದಿದ್ದಾರೆ.
ಸರ್ಕಾರ ಬೀಳುತ್ತೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ಕೆಲಸ ಇಲ್ಲದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರು ಸೋತಿದ್ದಾರೆ. ರಾಜ್ಯದ ಜನ ನಮಗೆ 136 ಸೀಟು ಕೊಟ್ಟು ಗೆಲ್ಲಿಸಿದ್ದಾರೆ. ಐದು ವರ್ಷ ಸುಭದ್ರ ಸರ್ಕಾರ ಕೊಡ್ತೇವೆ ಎಂದು ಭರವಸೆ ನೀಡಿದ್ದಾರೆ.
ಬಿಜೆಪಿ ನಾಯಕರು ಭ್ರಮನಿರಸವಾಗಿದ್ದಾರೆ, ಅವರಿಗೆ ಅಧಿಕಾರ ಇಲ್ಲದೆ ಇರೋಕ್ ಆಗಲ್ಲ. ಮತ್ತೆ ಅಪರೇಷನ್ ಮಾಡೋಕೆ ಪ್ರಯತ್ನ ಮಾಡ್ತಾರೆ. ಅದು ಸಾಧ್ಯವಾಗಲ್ಲ. 5 ವರ್ಷಕ್ಕೊಮ್ಮೆ ಚುನಾವಣೆ ಬರುತ್ತದೆ. ಜನ ಆರ್ಶೀವಾದ ಮಾಡಿದ್ದಾರೆ. 5 ವರ್ಷದ ಬಳಿಕ ಮತ್ತೆ ಚುನಾವಣೆಗೆ ಹೋಗುತ್ತೇವೆ. ಆ ಚುನಾವಣೆಯಲ್ಲೂ ಮತ್ತೆ ನಾವೇ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದಿದ್ದಾರೆ.
ಬಿಜೆಪಿ ಅವರು ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿ ಹೋಗಿದ್ರು, ಆದ್ರೂ ನಾವು 5 ಗ್ಯಾರಂಟಿಗಳ ಈಡೇರಿಸಿದ್ದೇವೆ. ಯತ್ನಾಳ್ ಸರ್ಕಾರ ಬೀಳುತ್ತೆ ಎಂಬ ಕನಸು ಕಾಣುತ್ತಿದ್ದಾರೆ. ಎಲ್ಲಾ ರಾತ್ರಿ ಕನಸು ಕಂಡ್ರೆ, ಪಾಪ ಅವ್ರು ಹಲಗಲ್ಲೇ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





