ವಿರಾಟ್ ಕೊಹ್ಲಿಗೆ ಇಂದು 35ನೇ ಜನ್ಮದಿನದ ಸಂಭ್ರಮ ಮನೆ ಮಾಡಿದೆ. ಇಂದು ಏಕದಿನ ವಿಶ್ವಕಪ್ನಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಈ ವೇಳೆ ಅವರಿಂದ ದಾಖಲೆಯ 49ನೇ ಏಕದಿನ ಶತಕ ದಾಖಲಾಗುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.
ಕೊಹ್ಲಿ ಈಡನ್ನಲ್ಲಿ ಶತಕ ಸಿಡಿಸಿದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ 49 ಏಕದಿನ ಶತಕಗಳ ವಿಶ್ವದಾಖಲೆ ಸರಿಗಟ್ಟಲಿದ್ದಾರೆ. ನಾಯಕ ರೋಹಿತ್ ಶರ್ಮಗೂ ಈಡನ್ ನೆಚ್ಚಿನ ಮೈದಾನವಾಗಿದ್ದು, ಅವರ ವಿಶ್ವದಾಖಲೆಯ 264 ರನ್ ಸಿಡಿದಿದ್ದು ಇಲ್ಲೇ ಆಗಿದೆ. ಹೀಗಾಗಿ ಕೊಹ್ಲಿ ರ್ಬತ್ಡೇಗೆ ಗೆಲುವಿನ ಉಡುಗೊರೆಯ ನಿರೀಕ್ಷೆಯೂ ಹೆಚ್ಚಿದೆ.
ಕೊಹ್ಲಿ ಜನ್ಮದಿನವನ್ನು ವಿಶೇಷವಾಗಿ ಸಂಭ್ರಮಿಸಲು ಯೋಜನೆ ರೂಪಿಸಿದ್ದ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ), ವಿವಿಧ ಕಾರಣಗಳಿಂದ ಕೊನೇಕ್ಷಣದಲ್ಲಿ ಅವೆಲ್ಲವನ್ನೂ ರದ್ದುಗೊಳಿಸಿದೆ. ಕೊಹ್ಲಿ ಕೇಕ್ ಕಟ್ಟಿಂಗ್ ಕೂಡ ಡ್ರೆಸ್ಸಿಂಗ್ ರೂಂನಲ್ಲೇ ಮಾಡಲಿದ್ದಾರೆ. ಕೊಹ್ಲಿ ಮಾಸ್ಕ್ ಧರಿಸುವ ಯೋಜನೆಗೆ ಭದ್ರತಾ ಕಾರಣಗಳಿಂದಾಗಿ ಬಿಸಿಸಿಐ ಅನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





